Kundapra.com ಕುಂದಾಪ್ರ ಡಾಟ್ ಕಾಂ

ಆಲೆ – ಸಿರಿಧಾನ್ಯಗಳ ಹೆಲ್ತ್ ಮಿಕ್ಸ್ ಉತ್ಪನ್ನ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಪರಿಹಾರ ಒದಗಿಸಬಲ್ಲ ‘ಆಲೆ’ – ಸಿರಿಧಾನ್ಯ ಹೆಲ್ತ್ ಮಿಕ್ಸ್ ಉತ್ಪನ್ನಗಳನ್ನು ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಅವರು ಬಿಡುಗಡೆಗೊಳಿಸಿದರು.

ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಪ್ರಮುಖ, ಉದ್ಯಮಿ ಶ್ರೀಧರ್ ಬಿಜೂರು ಅವರ ಮಾಲೀಕತ್ವದಲ್ಲಿ ಆರಂಭಗೊಂಡಿರುವ ‘ಆಲೆ’ – ಸಿರಿಧಾನ್ಯಗಳ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭ ಉದ್ಯಮಿಗಳಾದ ಡಾ. ಗೋವಿಂದ ಬಾಬು ಪೂಜಾರಿ, ವಾಸು ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಉತ್ತಮ ಆರೋಗ್ಯಕ್ಕಾಗಿ ಆಲೆ – ಹೆಲ್ತ್ ಮಿಕ್ಸ್:
ಪ್ರಸ್ತುತ ದಿನಗಳಲ್ಲಿ ಮಕ್ಕಳು ಹಾಗೂ ಹಿರಿಯರು ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಂದ ಬಳುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭೂಮಿಯಲ್ಲಿ ಸಹಜ ಕೃಷಿಯಿಂದ ಬೆಳೆದ ಸಮತೋಲಿತ ಪೌಷ್ಠಿಕಾಂಶಗಳ ಆಗರವಾದ ಸಿರಿಧಾನ್ಯಗಳ ಸೇವನೆ ಅತ್ಯಗತ್ಯ. ಸಿರಿಧಾನ್ಯಗಳು ಸುಲಭ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಹಾಗೂ ಮನುಷ್ಯನ ನರನಾಡಿಗಳಲ್ಲಿ ಚೈತನ್ಯ ತುಂಬಿ ಮೂಳೆ ಹಾಗೂ ಮಾಂಸ ಖಂಡಗಳನ್ನು ಸದೃಢಗೊಳಿಸುವ ಸಾಮರ್ಥ್ಯ ಹೊಂದಿದೆ.

ಹೀಗೆ ಸಿರಿಧಾನ್ಯವನ್ನು ಬಳಸಿ, ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ‘ಆಲೆ’ ಹೆಲ್ತ್ ಮಿಕ್ಸ್ ಉತ್ಪನ್ನವನ್ನು ತಯಾರಿಸಲಾಗಿದೆ. ಆರೋಗ್ಯವಂತ ಹಿರಿಯರಿಗಾಗಿ ‘ಆಲೆ ಆಲ್ ಟೈಮ್’, ಆರೋಗ್ಯವಂತ ಯುವಕರಿಗಾಗಿ ‘ಆಲೆ ಸ್ಟೋರ್ಟ್ಸ್ ಟೈಮ್’ ಹಾಗೂ ಆರೋಗ್ಯವಂತ ಮಕ್ಕಳಿಗಾಗಿ ‘ಆಲೆ ಸ್ಕೂಲ್ ಟೈಮ್’ ಎಂಬ 3 ಬಗೆಯ ಸಿರಿಧಾನ್ಯಗಳ ಹೆಲ್ತ್ ಮಿಕ್ಸ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಸಿರಿಧಾನ್ಯಗಳಿಂದ ಅಲೆ ರಾಗಿ ಮಸಾಲಾ ಇಡ್ಲಿ ಮಿಕ್ಸ್, ಆಲೆ ನವಣೆ ಇಡ್ಲಿ ಮಿಕ್ಸ್, ಅಲೆ ರಾಗಿ ದೋಸೆ ಹಿಟ್ಟು, ಆಲೆ ಸಿರಿಧಾನ್ಯಗಳ ದೋಸೆ ಹಿಟ್ಟು ಕೂಡ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

ಆಲೆ ಹೆಲ್ತ್ ಮಿಕ್ಸ್ ಹಳ್ಳಿ ಮನೆ ಮಾದರಿಯಲ್ಲಿಯೇ ತಯಾರಾಗುತ್ತಿದ್ದು, ಎಲ್ಲಾ ರೀತಿಯ ಸಿರಿಧಾನ್ಯ ಮತ್ತು ಧಾನ್ಯಗಳನ್ನು ಆರಿಸಿ ತೊಳೆದು, ಆಯ್ದ ಧಾನ್ಯಗಳನ್ನು ಮೊಳಕೆ ಬರಿಸಿ, ನೆರಳಿನಲ್ಲಿ ಒಣಗಿಸಿ, ಮಡಿಕೆಯಲ್ಲಿ ಹುರಿದು ಪುಡಿ ಮಾಡಿ, ಸೂಕ್ತ ವಿಧಾನದ ಮೂಲಕ ಪ್ಯಾಕೇಜಿಂಗ್ ಮಾಡಲಾಗುತ್ತದೆ.

Exit mobile version