Site icon Kundapra.com ಕುಂದಾಪ್ರ ಡಾಟ್ ಕಾಂ

ಮೂರೂರು ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ: ರಜತ ವರ್ಷದ ಅಧ್ಯಕ್ಷರಾಗಿ ಮಹೇಶ್ ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೂರೂರು ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ರಜತ ವರ್ಷದ ಅಧ್ಯಕ್ಷರಾಗಿ ಮಹೇಶ್ ಪೂಜಾರಿ ಕೋಣೆ ಪ್ರಧಾನ ಕಾರ್ಯದರ್ಶಿಯಾಗಿ ಗಜೇಂದ್ರ ಆಚಾರ್ ಕೋಣಿ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಸುಬ್ಬಣ್ಣ ಕೋಣಿ, ಉಪಾಧ್ಯಕ್ಷರಾಗಿ ಸಂದೇಶ ಕಾಂಚನ್, ಜೊತೆ ಕಾರ್ಯದರ್ಶಿಯಾಗಿ ಗಜೇಂದ್ರ ಪೂಜಾರಿ ಕಟ್ಕೇರಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ, ಪ್ರವೀಣ್ ಭಂಡಾರಿ, ಶ್ರೀಧರ ಚಂದನ್, ಮಂಜುನಾಥ ಪೂಜಾರಿ, ಅಂಕಿತಾ ತನುಜ, ಕ್ರೀಡಾ ಕಾರ್ಯದರ್ಶಿಗಳಾಗಿ ಈಶ್ವರ ಪೂಜಾರಿ, ಸುಧೀರ್ ಚಂದನ್, ರಾಮಲಲ್ಲಾ ಆಚಾರ್, ವಿಖ್ಯಾತ ಬಂಗೇರ ರಾಜೇಶ್ ಬಂಗೇರ ಕೋಶಾಧಿಕಾರಿಗಳಾಗಿ ಪ್ರದೀಪ್ ಚಂದನ್ ಸುಮಂತ್ ಬಂಗೇರ, ಜಯಪ್ರಶಾಂತ ಪೂಜಾರಿ ಪ್ರಶಾಂತ ಬಂಗೇರ, ರಘು ವಿ ಪೂಜಾರಿ, ಲೆಕ್ಕ ಪರಿಶೋಧಕರಾಗಿ ಅಶೋಕ ಭಂಡಾರಿ,ದಿನೇಶ್ ಆಚಾರ್, ವಸಂತ ಬಂಗೇರ, ಸುಬ್ರಹ್ಮಣ್ಯ ಆಚಾರ್, ಗಣೇಶ ಮೂರೂರು ಅಚ್ಚುತ ಮೂರೂರು, ಆಯ್ಕೆಯಾಗಿದ್ದಾರೆ.

ಧಾರ್ಮಿಕ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸತತ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೋಣಿ ಮೂರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆಯನ್ನು ವಿಶೇಷವಾಗಿ ನೆರವೇರಿಸುತ್ತ ಮುಂದಿನ ವರ್ಷ 25ರ ಸಂಭ್ರಮಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ದಿನಾಂಕ-03-04-2022 ನೇ ಆದಿತ್ಯವಾರ ಮೂರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು.

Exit mobile version