Site icon Kundapra.com ಕುಂದಾಪ್ರ ಡಾಟ್ ಕಾಂ

ಬಂಡೆಗೆ ಗುದ್ದಿ ಮೀನುಗಾರಿಕಾ ಬೋಟ್ ಮುಳುಗಡೆ, 7 ಮಂದಿಯ ರಕ್ಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಲ್ಪೆ ಬಂದರಿನಿಂದ ಭಟ್ಕಳಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಭಟ್ಕಳ ಬಂದರು ಸಮೀಪ ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೋಟಿನಲ್ಲಿದ್ದ 7 ಜನ ಮೀನುಗಾರರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.

ಮಲ್ವೆಯ ತೊಟ್ಟಂ ನಿವಾಸಿ ದೀಕ್ಷಿತ್ ಎಂಬುವರಿಗೆ ಸೇರಿದ ಸಿಹಾನ್ ಫಿಶರಿಸ್ ಎಂಬ ಬೋಟ್ ಸೋಮವಾರ ಬೆಳಿಗ್ಗೆ ಭಟ್ಕಳ ಬಂದರಿನಿಂದ 14 ನಾಟಿಕಲ್ ಮೈಲು ದೂರದಲ್ಲಿ ಕಲ್ಲು ಬಂಡೆಗೆ ತಾಗಿ ಒಳಗೆ ನೀರು ನುಗ್ಗಿ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ರವಿ, ನಾಗಪ್ಪ ಮೊಗೇರ ಮತ್ತು ಸಹಚರರನ್ನು, ಸ್ಥಳೀಯ ಜೈಶ್ರೀರಾಮ್ ಬೋಟಿನ ಮೀನುಗಾರರು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version