Kundapra.com ಕುಂದಾಪ್ರ ಡಾಟ್ ಕಾಂ

ಎ.9 ರಿಂದ 13 – ಲಾವಣ್ಯ ಬೈಂದೂರು 45ನೇ ವಾರ್ಷಿಕೋತ್ಸವ, ರಂಗಪಂಚಮಿ ನಾಟಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಲಾವಣ್ಯ ರಿ. ಬೈಂದೂರು ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ‘ರಂಗಪಂಚಮಿ ನಾಟಕೋತ್ಸವ’ ಶಾರದಾ ವೇದಿಕೆಯಲ್ಲಿ ಎಪ್ರಿಲ್ 9ರಿಂದ 13 ತನಕ ಜರುಗಲಿದೆ.

ಎ.9ರಂದು ಕಾರ್ಯಕ್ರಮವನ್ನು ಯುಥ್ ಫಾರ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಮಯ್ಯ ಅವರು ಉದ್ಘಾಟಿಸಲಿದ್ದಾರೆ. 5 ದಿನಗಳ ಕಾಲ ವಿವಿಧ ಅತಿಥಿಗಳು ಉಪಸ್ಥಿತರಿರಲಿದ್ದು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಜರುಗಲಿದೆ.

ರಂಗಪಂಚಮಿ ನಾಟಕೋತ್ಸವದಲ್ಲಿ ಎ.9ರಂದು ಹಾವೇರಿ ಶೇಷಗಿರಿ ಕಲಾತಂಡದಿಂದ ಕುವೆಂಪು ಅವರ ರಾಮಾಯಣ ದರ್ಶನಂ ಆಧಾರಿತ, ಎಂ. ಗಣೇಶ್ ಉಡುಪಿ ನಿರ್ದೇಶನದ ನಾಟಕ ‘ವಾಲಿವಧೆ’ ಪ್ರದರ್ಶನಗೊಳ್ಳಲಿದೆ. ಎ.10ರಂದು ಡ್ರಾಮಾಟ್ರಿಕ್ಸ್ ಬೆಂಗಳೂರು ಅಭಿನಯದ ಬೀಚಿ ಸಾಹಿತ್ಯಾಧಾರಿತ, ಎನ್.ಸಿ ಮಹೇಶ್ ರಚಿಸಿ, ರಾಜೇಂದ್ರ ಕಾರಂತ್ ಬೆಂಗಳೂರು ನಿರ್ದೇಶನದ ‘ಬೀಚಿ ಹೌಸ್’ ನಾಟಕ ಪ್ರದರ್ಶನಗೊಳ್ಳಲಿದೆ. ಎ.11ರಂದು ಅಭಿಯಂತರರು ಮೈಸೂರು ಅಭಿಯನಯದ ರಾಜೇಂದ್ರ ಕಾರಂತ್ ನಿರ್ದೇಶನದ ‘ಮಲ್ಲಿಗೆ ತೋಟದಲ್ಲಿ ಮರ್ಡರ್’ ನಾಟಕ, ಎ.12ರಂದು ಸಮುದಾಯ ಧಾರವಾಡ ಅಭಿನಯದ ಡಾ. ಶ್ರೀ ಶೈಲ ಹುದ್ದಾರ್ ರಚಿಸಿ, ವಾಸುದೇವ ಗಂಗೇರ ನಿರ್ದೇಶಿಸಿದ ‘ಬುದ್ಧ – ಪ್ರಬುದ್ಧ’ ನಾಟಕ ಹಾಗೂ ಎ.13ರಂದು ರಂಗಭೂಮಿ ಉಡುಪಿ ಅಭಿನಯದ ಮೌನೇಶ್ ಬಡಿಗೇರ ರಚಿಸಿ, ಮಂಜುನಾಥ ಎಲ್ ಬಡಿಗೇರ ನಿರ್ದೇಶಿಸಿದ ನಾಟಕ ‘ವಿ.ಶಾಂ.ಕೇ.’ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಚ್. ಉದಯ ಆಚಾರ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಮೂರ್ತಿ ಡಿ. ಬೈಂದೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version