ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಎ.10: ಪಾಪ ಕ್ರತ್ಯಗಳಿಂದ ಕೆಟ್ಟು ಹೋಗಿದ್ದ ಲೋಕದ ಕಲ್ಯಾಣಕ್ಕಾಗಿಯೇ ಯೇಸು ಹುಟ್ಟಿದ್ದು, ದೇವರ ಯೋಜನೆಯಂತೆ ತನ್ನ ಜೀವ ಬಲಿದಾನ ಮಾಡಿ ಜಗತ್ತನ್ನು ಪಾಪ ವಿಮೋಚನೆ ಮಾಡುವುದೇ ಆತನ ಗುರಿಯಾಗಿತ್ತು. ಯೇಸುವಿನ ಮರಣದ ನಂತರ ಅಸಂಖ್ಯಾತ ಜನರು ಯೇಸುವಿಗೆ ನಂಬತೊಡಗಿದರು ಎಂದು ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ|ಮ್ಯಾಕ್ಷಿಮ್ ಡಿಸೋಜಾ ಸಂದೇಶ ನೀಡಿದರು.
ಅವರು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದ (ಫಾಮ್ ಸಂಡೆ) ಬಲಿದಾನ ಅರ್ಪಿಸಿ ಪ್ರವಚನ ನೀಡಿದರು. ಅದಕ್ಕೂ ಮೊದಲು ಅವರು ಗರಿಗಳನ್ನು ಆಶಿರ್ವಾದಿಸುವ ಸಂಸ್ಕಾರ ನೇರವೇರಿಸಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗರಿಗಳ ಭಾನುವಾರದ ಸಂಸ್ಕಾರದಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂಸ್ಕಾರದಲ್ಲಿ ಭಾಗವಹಿಸಿದರು.
ಬೈಂದೂರಿನ ಹೋಲಿಕ್ರಾಸ್ ಚರ್ಚ್‌ನಲ್ಲಿಯೂ ಗರಿಗಳ ಭಾನುವಾರ’ವನ್ನು ಇರ್ಗಜಿಯ ಧರ್ಮಗುರು . ಪಾ. ವಿನ್ಸೆಂಟ್ ಕುವೆಲ್ಲೊ ರವರ ನೇತ್ರತ್ವದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು