Kundapra.com ಕುಂದಾಪ್ರ ಡಾಟ್ ಕಾಂ

ಕ್ರಿಕೆಟ್ ಪಂದ್ಯಾಟ: ಇಲೆವೆನ್ ಅಪ್ ಕೋಟ, ಅಂಶು ಕೋಟೇಶ್ವರ ಚಾಂಪಿಯನ್ಸ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:
ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಪ್ರಾಯೋಜಿತ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ ಮತ್ತು ಅಂಶು ಕೋಟೇಶ್ವರ ತಂಡ ಪ್ರಶಸ್ತಿ ಜಯಿಸಿದೆ.

ಫೈನಲ್ ಪಂದ್ಯದಲ್ಲಿ ಅಭಿ ಕೋಟ ಸರ್ವಾಂಗೀಣ ಆಟದ ಫಲವಾಗಿ, ಪಾರಂಪಳ್ಳಿ ಕ್ರಿಕೆಟರ್ಸ್ ತಂಡ ಸೋಲಿಸಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಅಭಿ ಕೋಟ, ಬೆಸ್ಟ್ ಬ್ಯಾಟ್ಸ್‌ಮನ್ ಪುಂಡಲೀಕ ಸಾಸ್ತಾನ ಮತ್ತು ಬೆಸ್ಟ್ ಬೌಲರ್ ಪ್ರಶಸ್ತಿ ಯೋಗೀಶ್ ಕೋಟ ತನ್ನದಾಗಿಸಿಕೊಂಡರು.

ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸಚಿನ್ ಕೋಟೇಶ್ವರ, ಬೆಸ್ಟ್ ಬ್ಯಾಟ್ಸ್‌ಮನ್ ಗಣೇಶ್ (ಬೀಜಾಡಿ) ಟೊರ್ಪೆಡೋಸ್, ಬೆಸ್ಟ್ ಬೌಲರ್ ಸಚಿನ್ ಶೆಟ್ಟಿ ಪಡೆದುಕೊಂಡರು.

ಸಮಾರೋಪ:
ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಡಿ, ಯುವ ಆಟಗಾರರ ಭಾಗವಹಿಸುವಿಕೆಯಿಂದ ಟಿ.ಸಿ.ಎ ೭ ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.೧೦ ಓವರ್ ಗಳಲ್ಲಿ ಆಟಗಾರರ ಪರಿಪೂರ್ಣ ಪ್ರದರ್ಶನ ಹೊರಹೊಮ್ಮಿದೆ. ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಯೋಜನೆಗಳು ರಾಜ್ಯದ ಹೆಚ್ಚಿನ ಜಿಲ್ಲೆಗಳ ಗಮನ ಸೆಳೆದಿದ್ದು, ಮೇ ೭ ಮತ್ತು ೮ ರಂದು ಟಿ.ಸಿ.ಎ ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಟಿ.ಸಿ.ಎ ಗೌರವಾಧ್ಯಕ್ಷ ಶ್ರೀಧರ್ ಶೆಟ್ಟಿ, ಹಿರಿಯರಾದ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಟಿ.ಸಿ.ಎ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ, ಟಿ.ಸಿ.ಎ ಗೌರವಾಧ್ಯಕ್ಷ ಶ್ರೀಪಾದ ಉಪಾಧ್ಯಾಯ,

ರಾಘವೇಂದ್ರ ಹೊಳ್ಳ ,ಸತೀಶ್ ಕುಂದರ್, ನಾಗೇಶ್ ರಾವ್ ಶ್ರೀಲತಾ ಕುಂದಾಪುರ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಯಾದವ್ ನಾಯಕ್ ಕೆಮ್ಮಣ್ಣು, ಪ್ರವೀಣ್ ಪಿತ್ರೋಡಿ, ಸತೀಶ್ ಕೋಟ್ಯಾನ್, ನಾರಾಯಣ ಶೆಟ್ಟಿ ಕೋಟೇಶ್ವರ, ಕೋಟ ರಾಮಕೃಷ್ಣ ಆಚಾರ್, ಅರ್ಮಾನ್ ಉಪಸ್ಥಿತರಿದ್ದರು.

ಕೆ.ಪಿ. ಸತೀಶ್, ಮನೋಜ್ ನಾಯರ್ ನಿರೂಪಿಸಿದರು. ವೀಕ್ಷಕ ವಿವರಣೆಗಾರರಾಗಿ ಅಜಯ್ ರಾಜ್ ಮಂಗಳೂರು, ನಾಸೀರ್ ಕೋಟೇಶ್ವರ, ನಿತೇಶ್ ಗೋಲ್ಡನ್ ಮಿಲ್ಲರ್, ರಾಘವೇಂದ್ರ ಚರಣ್ ನಾವಡ ಮತ್ತು ರಂಜಿತ್ ಶೆಟ್ಟಿ ಸಹಕರಿಸಿದರು.

Exit mobile version