Kundapra.com ಕುಂದಾಪ್ರ ಡಾಟ್ ಕಾಂ

ಎ.16, 17 ರಂದು ಕೊಲ್ಲೂರು ಶ್ರೀ ಸದ್ಗುರು ನಿತ್ಯಾನಂದ ನಾಗರಾಜ ಟ್ರಸ್ಟ್ 63ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಇಲ್ಲಿನ ಶ್ರೀ ಸದ್ಗುರು ನಿತ್ಯಾನಂದ ನಾಗರಾಜ ಟ್ರಸ್ಟ್’ನ 63ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳು ಎಪ್ರಿಲ್ 16 ಹಾಗೂ 17ರಂದು ಶ್ರೀ ಸ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಜರುಗಲಿದೆ.

ಎಪ್ರಿಲ್ 15ರ ಶುಕ್ರವಾರ ಬೆಳಿಗ್ಗೆ ಶ್ರೀ ನಿತ್ಯಾನಂದ ಗುರು ಸನ್ನಿಧಿಯಲ್ಲಿ ದ್ವಾದಶ ನಾರೀಕೇಳ ಗಣಯಾಗ ಮತ್ತು ನವಕುಂಭ ಸ್ವಪನಾಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಎಪ್ರಿಲ್ 16ರ ಶನಿವಾರ ಸಂಜೆ ಶ್ರೀ ಗುರು ನಿತ್ಯಾನಂದ ಸನ್ನಿಧಿಯಲ್ಲಿ ಕಲಶಸ್ಥಾಪನಕಲ್ಪೋಕ್ತ ಪೂಜೆ ಮತ್ತು ಶ್ರೀ ಗುರು ಮಿಮಲಾನಂದ ಸ್ವಾಮೀಜಿಯವರ ಅಭಿಷೇಕ ಪೂಜೆ ಹಾಗೂ ಎಪ್ರಿಲ್ 17ರ ಆದಿತ್ಯವಾರ ಶ್ರೀ ನಾಗದೇವರ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶಸ್ಥಾಪನಾ ಸ್ಥಪನಾಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜಾ, ಆಶೀರ್ವಾದ, ಪ್ರಸಾದ ವಿತರಣೆ

ವಿಶೇಷ ಪೂಜೆ:
ಎಪ್ರಿಲ್ 16ರ ಶನಿವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ವೃತೋದ್ಯಾಪನಾಂಗ ದಶವಿಧಿಸ್ನಾನ, ಶ್ರೀ ಗುರುಗಣಪತಿ ದೇವತಾ ಪ್ರಾರ್ಥನಾಪೂರ್ವಕ ಪುಣ್ಯಹ, ನಾಂದಿ, ಯಮುನಾ ಪೂಜೆ, ಸೌಪರ್ಣಿಕಾ ನದಿಯಿಂದ ವಾದ್ಯಘೋಷಗಳೊಂದಿಗೆ ಗಂಗೆ ತರುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ 17ರ ಆದಿತ್ಯವಾರ ಶ್ರೀ ಸತ್ಯನಾರಾಯಣ ವೃತೋದ್ಧ್ಯಾಪನಾ ಹೋಮ, ಮಹಾಪೂಜೆ, ದಾನಾಧಿಗಳು, ದಂಪತಿ ಪೂಜಾ, ಆಚಾರ್ಯ ಪೂಜಾ, ಆಶೀರ್ವಾದ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಲಿದೆ. ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಸದ್ಗುರು ನಿತ್ಯಾನಂದ ನಾಗರಾಜ ಟ್ರಸ್ಟ್ ಪ್ರವರ್ತಕರಾದ ಜಯಾನಂದ ಅವರು ತಿಳಿಸಿದ್ದಾರೆ.

Exit mobile version