Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ಶಿಲಾಮಯ ದೇವಸ್ಥಾನಕ್ಕೆ ಶಿಲಾನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಕಾರಣೀಕ ಕ್ಷೇತ್ರವಾಗಿದ್ದು, ದೇಶ ವಿದೇಶಗಳಲ್ಲಿರುವ ಸಹಸ್ರಾರು ಭಕ್ತರು ಶ್ರೀದೇವರನ್ನು ನಂಬಿಕೊಂಡಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಶ್ರೀ ಮಹಾಂಕಾಳಿ ಅಮ್ಮನವರ ಶಿಲಾಮಯ ದೇವಸ್ಥಾನದ ನಿರ್ಮಾಣ ಕಾರ್ಯ ಉತ್ತಮ ರೀತಿಯಲ್ಲಿ ಸದ್ಭಕ್ತರ ಸಹಕಾರದಿಂದ ನಡೆಯಲಿ. ಶ್ರೀದೇವರ ಅನುಗ್ರಹ ಆಶೀರ್ವಾದದಿಂದ ಗ್ರಾಮದ ಅಭಿವೃದ್ಧಿ ಹಾಗೂ ನಂಬಿದ ಭಕ್ತರಿಗೆ ಸನ್ಮಂಗಲವಾಗಲಿ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಅವರು ಗುರುವಾರ ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣ ಕಾರ್ಯದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಪುರೋಹಿತರಾದ ರವೀಶ ಭಟ್ ನೇತೃತ್ವದಲ್ಲಿ ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಂಕರ ಖಾರ್ವಿ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉದ್ಯಮಿ ಶೇಷಯ್ಯ ಕೋತ್ವಾಲ್, ಎಂ.ಎಂ.ಮಡಿವಾಳ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಮೀನುಗಾರ ಮುಖಂಡರಾದ ನಾರಾಯಣ ಖಾರ್ವಿ, ಸೌಪರ್ಣಿಕ ಬಸವ ಖಾರ್ವಿ, ರಮೇಶ ಕುಂದರ್, ರಾಘವೇಂದ್ರ ಖಾರ್ವಿ, ವೈ.ಸುರೇಶ ಖಾರ್ವಿ, ರವಿಶಂಕರ ಖಾರ್ವಿ, ರಾಮಪ್ಪ ಖಾರ್ವಿ, ಪಟೇಲರು, ಆಡಳಿತ ಮಂಡಳಿ ಹಾಗೂ ಜೀಣೋದ್ಧಾರ ಸಮಿತಿ ಸದಸ್ಯರು, ಸಮಾಜಬಾಂಧವರು, ಭಕ್ತರು ಮೊದಲಾದವರು ಉಪಸ್ಥಿತರಿದ್ದರು.

Exit mobile version