Kundapra.com ಕುಂದಾಪ್ರ ಡಾಟ್ ಕಾಂ

ಶಿವಮೊಗ್ಗ-ರೇಣಿಗುಂಟ (ತಿರುಪತಿ) – ಚೆನ್ನೈ ನೂತನ ರೈಲಿಗೆ ಸಂಸದರಿಂದ ಹಸಿರು ನಿಶಾನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಿವಮೊಗ್ಗ:
ರೈಲ್ವೆ ಇಲಾಖೆಗೆ ನಿರಂತರ ಮನವಿಗಳ ಫಲವಾಗಿ ಶಿವಮೊಗ್ಗ-ಬೆಂಗಳೂರು ಮದ್ರಾಸ್ ಎಕ್ಸಪ್ರೆಸ್ ಹಾಗೂ ಶಿವಮೊಗ್ಗ-ರೇಣಿಗುಂಟ(ತಿರುಪತಿ) ರೈಲುಗಳನ್ನು ಒಗ್ಗೂಡಿಸಿ ಶಿವಮೊಗ್ಗದಿಂದ ತಿರುಪತಿ ಹಾಗೂ ಮದ್ರಾಸ್ಗೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯ ಹಾಗೂ ಮಾರ್ಗವನ್ನು ಬದಲಿಸಿ ಶಿವಮೊಗ್ಗ – ರೇಣಿಗುಂಟ ಮದ್ರಾಸ್, ಎಕ್ಸಪ್ರೆಸ್ ರೈಲು ಸೇವೆಗೆ ಇಂದು ಚಾಲನೆ ನೀಡಲಾಗುತ್ತಿರುವುದು ಸಂತಸ ತಂದಿದೆ, ಶಿವಮೊಗ್ಗ-ಶಿಕಾರಿಪುರ ರಾಣಿಬೆನ್ನೂರು ರೈಲು ಮಾರ್ಗವು ಸುಮಾರು 956 ಕೋಟಿ ಅಂದಾಜು ವೆಚ್ಚದಲ್ಲಿ 102 ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ಕಿ.ಮೀ. ಉದ್ದದ ರೈಲು ನಿರ್ಮಾಣ ಯೋಜನೆಯನ್ನು 2018-19ನೇ ಕೇಂದ್ರ ಮುಂಗಡ ಪತ್ರದಲ್ಲಿ ಮಂಜೂರು ಮಾಡಲಾಗಿದೆ

ಸ್ವಾತಂತ್ರ್ಯ ಬಂದ ನಂತರ ಶಿವಮೊಗ್ಗದಲ್ಲಿ ಮೊದಲ ನೂತನ ರೈಲ್ವೆ ಯೋಜನೆಯಾಗಿದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ ಟೌನ್ ರೈಲ್ವೇ ನಿಲ್ದಾಣದಲ್ಲಿ ನೂತನ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಈ ಹಿಂದೆ ಬೆಂಗಳೂರು ಮಾರ್ಗವಾಗಿ ಮದ್ರಾಸ್ ಗೆ ತೆರಳುತ್ತಿದ್ದ ಶಿವಮೊಗ್ಗ-ಮದ್ರಾಸ್ ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ-ತಿರುಪತಿ ರೈಲಿನೊಂದಿಗೆ ಸೇರ್ಪಡೆಯಾಗಿ ರೇಣಿಗುಂಟ ಮಾರ್ಗವಾಗಿ ಚೆನ್ನೈ ತಲುಪಲಿದೆ. ಈ ನೂತನ ರೈಲು ಸೇವೆಯು ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದ್ರಾಸ್ ನಿಂದ ಸೋಮವಾರ ಮತ್ತು ಬುಧವಾರಗಳಂದು ಸಂಚರಿಸಲಿದೆ.ವಾರಕ್ಕೆ ಎರಡುದಿನ ಸಂಚರಿಸುವ ಈ ರೈಲು ಸೇವೆ ಒದಗಿಸಲಿದೆ.

ರೈಲ್ವೆ ಮೇಲೇತುವೆಗಳು :
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರದಲ್ಲಿ ಎದುರಾಗುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಗರದ ನಾಲ್ಕು ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ಗಳ ನಿರ್ಮಿಸಲಾಗುತ್ತಿದೆ. ಬದಅಗೆ ರಸ್ತೆ ಮೇಲ್ವೇತುವೆ (ROB) ಗಳನ್ನು 60.76 ಕೋಟಿ ವೆಚ್ಚದಲ್ಲಿ ಸೌಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ, ಕಾಶಿಪುರದಲ್ಲಿ 29,63 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ, ಕಾಲೋನಿಗೆ ಹೋಗುವ ರಸ್ತೆಯಲ್ಲಿನ ರೈಲ್ವೆ ಲೆವಲ್ ಕ್ರಾಸಿಂಗ್ಗೆ ರೈಲ್ವೆ ಕೆಳಸೇತುವೆ ನಿರ್ಮಾಣ, ವಿದ್ಯಾನಗರ ಬಳಿ ರೂ. 43,9 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ವೃತ್ತಕಾರದ ರೈಲ್ವೆ ಮೇತುವೆ ನಿರ್ಮಾಣ, ಭದ್ರಾವತಿ ನಗರದ ಕಡದಕಟ್ಟೆ, ಬಳಿ ರೂ. 25.92 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲೇತುವೆ ನಿರ್ಮಾಣ ಕೆಲಸ ವೇಗದಿಂದ ನೆಡೆಯುತ್ತಿದೆ,

ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡರು, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು, ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಸೆಲ್ವಮಣಿ, ಜಿ. ಪಂ ಸಿಇಓ ವೈಶಾಲಿ, ಎಆರ್‌ಆರ್‌ಎಂ ದೇವಸಹಾಯಮ್, ಸೀನಿಯರ್ ಡಿಸಿಎಂ ಮಂಜುನಾಥ್, ಸಿನಿಯರ್ ಡಿಈಏನ್ ಭಗತ್ ಮತ್ತಿತರ ರೈಲ್ವೇ ಅಧಿಕಾರಿಗಳು, ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿರಿದ್ದರು.

Exit mobile version