ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಡಿ ಕಡಲ ತೀರದ ಬೇರೆ ಬೇರೆ ಕಡೆ ಹ್ಯಾಚರ್ ಮೂಲಕ ರಕ್ಷಿಸಲಾದ ಮೊಟ್ಟಿಗಳು ಮರಿಯೊಡೆದು ಕಡಲ ಸೇರುತ್ತಿದ್ದು, ಸೋಮವಾರ ರಾತ್ರಿ ೭ನೇ ಹ್ಯಾಚರಲ್ಲಿದ್ದ 98 ಕಡಲಾಮೆ ಮರಿಗಳು ಕಡಲು ಸೇರಿಸಲಾಯಿತು.
ಕಡಲಮೆ ಮರಿಗಳ ಕಡಲು ಸೇರಿಸುವ ಪ್ರಕ್ರಿಯೆ ರಾತ್ರಿಯಿಂದ ಬೆಳಗಿನ ಜಾವದ ತನಕ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಎಫ್‌ಎಸ್‌ಲ್ ಇಂಡಿಯಾ, ಸ್ಥಳೀಯ ಮೀನುಗಾರರ ಹಾಗೂ ಪರಿಸರದ ನಾಗರಿಕರು ಆಮೆ ಮಿರಿ ಕಡಲಿಗೆ ಸೇರಿಸುವ ಪ್ರಕ್ರಿಯೆಯಲ್ಲಿ ಕೈಜೋಡಿಸಿದರು.
ಎಸ್‌ಎಫ್‌ಎಲ್ ಇಂಡಿಯಾದ ದಿನೇಶ್ ಸಾರಂಗ, ವೆಂಕಟೇಶ್, ರಾಜೇಶ್ ಸೋನ್ಸ್, ನಾಗರಾಜ ಶೆಟ್ಟಿ, ಅರಣ್ಯ ಇಲಾಖೆ ರಂಜಿತ್ ಕುಮಾರ್ ಮತ್ತು ರಾಜೇಶ್ ಕುಮಾರ್, ರಾಘವೇಂದ್ರ, ಭರತ್ ಖಾರ್ವಿ, ಆಮೆ ಮೊಟ್ಟೆ ಪತ್ತೆಮಾಡಿದ್ದ ಬಾಬು ಮೊಗವೀರ, ಕೃಷ್ಣ ಖಾರ್ವಿ, ಗೋವಿಂದ ಸಾರಂಗ ಇದ್ದರು.