Kundapra.com ಕುಂದಾಪ್ರ ಡಾಟ್ ಕಾಂ

ನಾಡ ವಿಪ್ರ ಸೇವಾ ಸಹಕಾರಿ ಸಂಘದ ಕಾರ್ಯಾಲಯ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೈಂದೂರು ಪರಿಸರದಲ್ಲಿ ಬ್ರಾಹ್ಮಣರು ಜಾತಿ ಪರಿಗಣನೆಯಲ್ಲಿ ಅಲ್ಪ ಸಂಖ್ಯಾತರು. ಆರ್ಥಿಕವಾಗಿಯೂ ದುರ್ಬಲರು. ಅವರ ಆರ್ಥಿಕ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ನಾಡ ಕೇಂದ್ರಿತವಾಗಿ ವಿಪ್ರ ಸೇವಾ ಸಹಕಾರಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ. ವಿನಾಯಕ ರಾವ್ ಹೇಳಿದರು.

ನಾಡ ಗುಡ್ಡೆಯಂಗಡಿಯ ಬಡಾಕೆರೆ ಮಾರ್ಗದಲ್ಲಿರುವ ಸ್ಪೂರ್ತಿ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ನಡೆದ ಸಂಘದ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕು ವ್ಯಾಪ್ತಿಯ ಈ ಸಂಘಕ್ಕೆ ಎಲ್ಲ ವಿಪ್ರರೂ ಸದಸ್ಯರಾಗಬೇಕು. ಸಾಧ್ಯವಾದವರು ಠೇವಣಿ ನೀಡುವುದರ ಜತೆಗೆ ಅನ್ಯ ಸಮುದಾಯದವರಿಂದಲೂ ಠೇವಣಿ ಸಂಗ್ರಹಿಸುವ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಅವರು ವಿಂತಿಸಿದರು.

ನಿವೃತ್ತ ಶಿಕ್ಷಕ ಪಿ. ರಾಮಚಂದ್ರಯ್ಯ ಸಂಘದ ಕಚೇರಿಯನ್ನು ಉದ್ಘಾಟಿಸಿದರು. ನಾಗೇಶ ಹೆಬ್ಬಾರ್ ಪಡುಕೋಣೆ ಷೇರು ಪತ್ರ ವಿತರಿಸಿದರು. ಹೊರ್ಣಿ ಪದ್ಮನಾಭ ಹೆಬ್ಬಾರ್ ಠೇವಳಿ ಪತ್ರ ಬಿಡುಗಡೆಗೊಳಿಸಿದರು. ಮರವಂತೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಹೆಬ್ಬಾರ್ ಗುಳ್ಕೋಣ್, ತಾಲೂಕು ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಅನಂತಪದ್ಮನಾಭ ಬಾಯಿರಿ, ಕಾರ್ಯದರ್ಶಿ ರತ್ನಾಕರ ಉಡುಪ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಶುಭ ಹಾರೈಸಿದರು.

ಶಿಕ್ಷಕ ಸಿ. ಕೃಷ್ಣ ಹೆಬ್ಬಾರ್ ಸ್ವಾಗತಿಸಿದರು. ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಎಂ. ಮೋಹನದಾಸ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಾಥ ಪುರಾಣಿಕ್ ವಂದಿಸಿದರು. ಸಂತೋಷ್ ಹೆಬ್ಬಾರ್ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಡಾ. ಎಂ ರತ್ನಾಕರ ಹೆಬ್ಬಾರ್, ವಿಶ್ವನಾಥ ನಾವಡ, ಶ್ರೀಕಾಂತ ಹೆಬ್ಬಾರ್, ವಿಷ್ಣುಮೂರ್ತಿ ಐತಾಳ್, ನಾರಾಯಣ ಹೆಬ್ಬಾರ್, ರಾಘವೇಂದ್ರ ಹೆಬ್ಬಾರ್, ಚಂದ್ರಶೇಖರ ಭಟ್, ನಾಗರಾಜ ಹೆಬ್ಬಾರ್, ಮಂಜುಳಾ ಹೆಬ್ಬಾರ್, ಶ್ರೀಲತಾ ಪುರಾಣಿಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ವಿಘ್ನೇಶ ರಾವ್ ಇದ್ದರು.

Exit mobile version