Kundapra.com ಕುಂದಾಪ್ರ ಡಾಟ್ ಕಾಂ

ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘ: ನೂತನ ಕಟ್ಟಡ, ಸಾಂದ್ರಶಿತಲೀಕರಣ ಘಟಕ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಎ.28:
ತಾಲೂಕಿನ ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ “ಚಂದ್ರಶ್ರೀ’ ಹಾಗೂ ಸಾಂದ್ರಶೀತಲೀಕರಣ ಘಟಕ ಉದ್ಘಾಟನೆ ಮತ್ತು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಇವರ ಸಹಭಾಗಿತ್ವದಲ್ಲಿ ಹೈನುಗಾರರ ಸಮಾವೇಶ ಉದ್ಘಾಟನಾ ಸಮಾರಂಭ ೧೧ನೇ ಉಳ್ಳೂರು ಗ್ರಾಮದ ಮೇಕೋಡುವಿನಲ್ಲಿ ನಡೆಯಿತು.

ಸಾಂದ್ರಶಿತಲೀಕರಣ ಘಟಕ ಹಾಗೂ ಸಮಾವೇಶ ಉದ್ಘಾಟಿಸಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹೈನುಗಾರರಿಗೆ ಹಾಗೂ ರೈತರ ಸಹಾಯಕ್ಕಾಗಿ ರಾಜ್ಯದಲ್ಲಿಯೇ ಎರಡನೇ ದೊಡ್ಡ ಸಾಂದ್ರಶೀತಲೀಕರಣ ಘಟಕದ ಆರಂಭಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಯೋಜನೆ ಅನುಷ್ಠಾನಗೊಳಿಸುವಲ್ಲಿ ಶ್ರಮಿಸಿದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಅಭಿನಂದನೆಗಳು. ಗ್ರಾಮದ ಅಭಿವೃದ್ಧಿಯ ಬಗ್ಗೆ ದೂರದೃಷ್ಠಿತ್ವ ಹೊಂದಿದ್ದ ದಿ. ವೈ. ಚಂದ್ರಶೇಖರ ಶೆಟ್ಟಿ ಅವರ ಕೊಡುಗೆ ಅಪಾರ. ಅವರ ಕಾರ್ಯಚಟುವಟಿಕೆ ಶ್ಲಾಘನೀಯವಾದದ್ದು ಎಂದರು.

ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್. ಬಿ. ಜಯರಾಮ ಮಾತನಾಡಿ ರೈತರಾಗಿ, ಹೈನುಗಾರರಾಗಿ ತಳಮಟ್ಟದಿಂದ ಹಾಲು ಉತ್ಪಾದಕರ ಸಂಘವನ್ನು ಕಟ್ಟಿ ಬೆಳಸಿದ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರ ಸೇವೆ ಅಭಿನಂದಿನಿಯವಾದುದು. ಸಂಘ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಗೋದಾಮು ಉದ್ಘಾಟಿಸಿದರು. ದ.ಕ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೊಡವೂರು ರವಿರಾಜ ಹೆಗ್ಡೆ ಶಾಶ್ವತ ಫಲಕದ ಅನಾವರಣ ಮಾಡಿದರು. ಸ್ಥಳದಾನಿ ದಿ.ವೈ.ಚಂದ್ರಶೇಖರ ಶೆಟ್ಟಿ ಅವರ ಭಾವಚಿತ್ರ ಅನಾವರಣ ಮಾಡಲಾಯಿತು. ಅವರ ಬದುಕಿನ ಕುರಿತು ಟೀಚರ‍್ಸ್ ಕೋ-ಆಪರೇಟಿವ್ ಬ್ಯಾಂಕ್‌ನ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಸ್ಮರಿಸಿಕೊಂಡರು.

ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, 40ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಪ್ರಸ್ತುತ 2,000ಲೀ ಹಾಲು ಪ್ರತಿದಿನ ನೀಡಲಾಗುತ್ತಿದೆ. ಮುಂದಿನ ಮೂರು ವರ್ಷದಲ್ಲಿ 5,000ಲೀ. ಗೆ ಹೆಚ್ಚಿಸುವ ಗುರಿ ಹೊಂದಿದ್ದೇ. 10ಸಾವಿರ ಲೀಟರ್ ಸಾಮರ್ಥ್ಯದ ಸಾಂದ್ರ ಶೀತಲಿಕರಣ ಘಟಕ ರಾಜ್ಯದಲ್ಲಿಯೇ ಎರಡನೆಯದಾಗಿದೆ ಎಂದರು.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಇವರನ್ನು ಸಮ್ಮಾನಿಸಲಾಯಿತು.

ದ.ಕ ಹಾಲು ಒಕ್ಕೂಟದ ನಿರ್ದೆಶಕರುಗಳಾದ ನರಸಿಂಹ ಕಾಮತ್ ಸಾಣೂರು, ಸ್ಮಿತಾ ಆರ್. ಶೆಟ್ಟಿ, ಸುಚರಿತ ಶೆಟ್ಟಿ, ನಾರಾಯಣ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಮಾಜಿ ಅಧ್ಯಕ್ಷರಾದ ಶೇಡಿಕೊಡ್ಲು ವಿಠ್ಠಲ ಶೆಟ್ಟಿ, ಮಾಜಿ ನಿರ್ದೇಶಕ ಟಿ. ಸೂರ್ಯ ಶೆಟ್ಟಿ ತೆಕ್ಕಟ್ಟೆ, ಗೋಪಾಲಕೃಷ್ಣ ಕಾಮತ್, ಸೋಮಶೇಖರ ಶೆಟ್ಟಿ, ಆಶೋಕ್ ಕುಮಾರ್ ಚೇರ್ಕಾಡಿ, ಹೆರೂರು ಗ್ರಾಪಂ ಅಧ್ಯಕ್ಷ ಸುರೇಶ್ ನಾಯ್ಕ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಮಮತಾ ಆರ್. ಶೆಟ್ಟಿ, ಖಂಬದಕೋಣೆ ಸೊಸೈಟಿ ನಿರ್ದೇಶಕರಾದ ಗುರುರಾಜ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.

ದ.ಕ.ಹಾಲು ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ರಾಜಾರಾಮ್ ನಿರೂಪಿಸಿದರು. ಮೇಕೋಡು ಹಾಲು ಉ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಶಲ್ ಕುಮಾರ್ ವಂದಿಸಿದರು.

Exit mobile version