Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಸುರಭಿ ಜೈಸಿರಿ 2022 ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಲೆಯ ವಿವಿಧ ಪ್ರಾಕರಗಳ ಕಲಿಕೆಗೆ ಗ್ರಾಮೀಣ ಭಾಗದಲ್ಲಿ ಕಳೆದೆರಡು ದಶಕಗಳಿಂದ ಅವಕಾಶ ಮಾಡಿಕೊಡುತ್ತಿರುವ ಸುರಭಿ ಸಂಸ್ಥೆಯು ಕಾರ್ಯ ಶ್ಲಾಘನಾರ್ಹವಾದುದು ಎಂದು ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಅವರು ಹೇಳಿದರು.

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಸುರಭಿ ಜೈಸಿರಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಬಹುಮುಖ್ಯವಾಗಿದ್ದು, ಸೂಕ್ತ ಸಮಯದಲ್ಲಿ ಅವರ ಆಸಕ್ತಿಯನ್ನರಿತು ಪ್ರೋತ್ಸಾಹಿಸುವುದು ಬಹುಮುಖ್ಯ ಎಂದರು.

ಚಿತ್ರಕಲಾ ಶಿಕ್ಷಕರಾದ ನರಸಿಂಹ ಪೂಜಾರಿ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು.ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೆಡಿಪಿ ಸದಸ್ಯರಾದ ರಾಮ ಕೆ. ಸೊಡಿತಾರ್, ಎಲ್ಐಸಿ ಅಭಿವೃದ್ಧಿ ಅಧಿಕಾರಿ ರಾಮ ಮೊಗವೀರ ಉಪಸ್ಥಿತರಿದ್ದರು.

ಸಂಗೀತ ವಿದ್ವಾನ್ ಮುದೂರು ಪಿ. ಬಾಲಸುಬ್ರಹ್ಮಣ್ಯಂ, ನೃತ್ಯ ವಿದೂಷಿ ಮಾನಸ ರಾಘವೇಂದ್ರ ಪಾರಂಪಳ್ಳಿ, ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ತಗ್ಗರ್ಸೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ನಿರ್ದೇಶಕ ಸುಧಾಕರ ಪಿ. ಗುರುವಂದನೆ ಯಾದಿ ವಾಚಿಸಿದರು. ಕವಿತಾ ವಿಜಯ ಕುಮಾರ್ ಸನ್ಮಾನಿತರ ಪರಿಚಯ ವಾಚಿಸಿದರು. ಸುರಭಿ ಸದಸ್ಯರಾದ ಆನಂದ ಮದ್ದೋಡಿ ಸ್ವಾಗತಿಸಿ. ರಾಘವೇಂದ್ರ ಕೆ. ವಂದಿಸಿದರು. ಉಪಾಧ್ಯಕ್ಷರಾದ ಅಬ್ದುಲ್ ರವೂಫ್ ಕಾರ್ಯಕ್ರಮ ವಂದಿಸಿದರು. ಬಳಿಕ ಸುರಭಿ ವಿದ್ಯಾರ್ಥಿಗಳಿಂದ ಗಾನಲಹರಿ, ನೃತ್ಯ ಸಿಂಚನ ಹಾಗೂ ಕಲಾಕುಂಚ ವೈಭವ ನಡೆಯಿತು.

Exit mobile version