ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಾದಿಯರ ದಿನದ ಅಂಗವಾಗಿ ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್ ಶಾಖೆಗಳಲ್ಲಿ ಹಿರಿಯ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ದಾದಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 10 ಜನ ಹಿರಿಯ ಅದೇ ರೀತಿ ವಿವಿಧ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತಿರುವ ನರ್ಸ್‌ಗಳನ್ನು ಅಭಿನಂದಿಸಲಾಯಿತು.
ಉಡುಪಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಹಾಗೂ ಎ.ವಿ. ಬಾಳಿಗ ಸಂಸ್ಥೆಯ ಖ್ಯಾತ ಮನೋವೈದ್ಯರಾದ ವಿರೂಪಾಕ್ಷ ದೇವರ ಮನೆ ಅತಿಥಿಗಳಾಗಿ ಭಾಗವಹಿಸಿದ್ದರು. ಸಿನಿಯರ್ ಜೆಸಿ ಉಡುಪಿ ಟೆಂಪಲ್ ಸಿಟಿ ಲಿಜನ್‌ನ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಗಿರಿಜಾ ಸರ್ಜಿಕಲ್ಸ್ ಪಾಲುದಾರರು ಉಪಸ್ಥಿತರಿದ್ದರು.