Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಪರೀಕ್ಷೆಯಲ್ಲಿ ಕುಂದಾಪುರದ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ. ಲಿ. ಕಂಪೆನಿ ವತಿಯಿಂದ ಕೇರಳದ ತಿರುವನಂತಪುರದಲ್ಲಿ ನಡೆದ ೧೭ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಪರೀಕ್ಷೆಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಕುಂದಾಪುರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸ್ಪರ್ಧೆಯ ವಿವಿಧ ಭಾಗಗಳಲ್ಲಿ ಸ್ಪರ್ಧಿಸಿದ ೨೦ ವಿದ್ಯಾರ್ಥಿಗಳಲ್ಲಿ ೫ ಮಂದಿ ಪ್ರಥಮ, ನಾಲ್ವರು ದ್ವಿತೀಯ, ನಾಲ್ವರು ತೃತೀಯ ಹಾಗೂ ಉಳಿದ ೭ ಮಂದಿ ವಿದ್ಯಾರ್ಥಿಗಳು ಇನ್ನುಳಿದ ಸ್ಥಾನಗಳನ್ನು ಪಡೆದು ಪ್ರಶಸ್ತಿ ಗಳಿಸಿದ್ದಾರೆ. ದಿವ್ಯ, ಭುವನ್ ಬಿ. ಕಾಂಚನ್, ಪರ್ವದಿ ಪಿ.ಎಂ., ವೇದಿಕ್ ವಿ.ದೇವಾಡಿಗ, ಅರ್ಥವ್ ಕೊಠಾರಿ ಪ್ರಥಮ ಸ್ಥಾನ ಪಡೆದುಕೊಂಡರು. ತನ್ವಿ, ಪ್ರಕುಲ್ ಮೆಂಡನ್, ಅಕ್ಷೆಭ್ಯ ರೈ, ಹಂಶಿಕಾ ದ್ವಿತೀಯ, ಸರ್ವಶ್ರೀ, ಕ್ರಿಸ್ಟಿನ್ ಪಿಂಟೋ, ಶಿಖರ್ ಮೆಂಡನ್, ಆದ್ಯಾ ಎನ್.ಕಾಂಚನ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಧನುಷ್ ಎಸ್. ಕಾವೇರಿ, ದಿಶಾಂತ್, ಪ್ರಶ್ವಿತ್, ಸ್ಕಂದನ ಆರ್. ಕಾಂಚನ್ ಚತುರ್ಥ ಸ್ಥಾನವನ್ನೂ, ಸ್ಟಾರೆಲ್, ಅಮೋಘ್ ಪೈ, ಹಾರ್ದಿಕ್ ಬಿಲ್ಲವ ಐದನೇ ಸ್ಥಾನವನ್ನು ಪಡೆದುಕೊಂಡರು.

Exit mobile version