ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಪಂಚಾಯತಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಶೆಡ್ತಿ (48) ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮುರೂರಿನ ಮನೆಯಿಂದ ಸಂಬಂಧಿಯ ಬೈಕಿನಲ್ಲಿ ಹೊರಟಿದ್ದ ಲಲಿತಾ ಶೆಟ್ಟಿ ಅವರಿಗೆ, ಹಲಗೇರಿ ಸಮೀಪ ಬೈಕ್ ಹೊಂಡ ತಪ್ಪಿಸುವವಾದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿ ಮಧ್ಯ ಸಾವಿಗೀಡಾದರು.