Kundapra.com ಕುಂದಾಪ್ರ ಡಾಟ್ ಕಾಂ

ಮಾರ್ಗೋಳಿ: ಶ್ರೀ ಶನೇಶ್ವರ ಮಹಿಳಾ ಸಹಕಾರಿ ಸಂಘ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿಯೂ ಪುರುಷರಷ್ಟೆ ಸಮಾನರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ, ಅದರಲ್ಲಿಯೂ ಆರ್ಥಿಕ ವ್ಯವಹಾರದಲ್ಲಿ ಅತ್ಯಂತ ಶಿಸ್ತನ್ನು ಪ್ರದರ್ಶಿಸುವ ಅವರ ಕೈಯಲ್ಲಿ ಸಹಕಾರಿ ಸಂಸ್ಥೆಗಳ ಜವಾಬ್ದಾರಿ ನೀಡಿದರೆ ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ಮಾಜಿ ಶಾಸಕ ಹಾಗೂ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೋಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಬಸ್ರೂರು ಮಾರ್ಗೋಳಿಯಲ್ಲಿ ಶ್ರೀ ಶನೇಶ್ವರ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಉಳಿತಾಯದ ವಿಷಯದಲ್ಲಿ ಸಮರ್ಥರಾಗಿದ್ದು, ಇಂದು ತಮ್ಮ ಉಳಿತಾಯದ ಹಣವನ್ನು ಸಹಕಾರಿ ಸಂಘಗಳಲ್ಲಿ ಠೇವಣೆಯಿಟ್ಟು ಆರ್ಥಿಕ ವಹಿವಾಟು ನಡೆಸಿ ಸ್ವಾವಲಂಬಿ ಜೀವನ ನಡೆಸುತ್ತಿರುವುದು ಉತ್ತಮ ಬೆಳವಣೆಯಾಗಿದೆ ಎಂದರು.

ಉಡುಪಿ ಜಿಲ್ಲಾ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಭಾಸ್ಕರ ಕಾಮತ್ ಷೇರುಪತ್ರ ಬಿಡುಗಡೆ ಮಾಡಿ ಮಾತನಾಡಿ, ರಾಜ್ಯದಲ್ಲಿ ೫ಸಾವಿರಕ್ಕೂ ಅಧಿಕ ಸೌಹಾರ್ದ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಸಂಘಗಳು ಲಾಭದಲ್ಲಿದೆ. ನಮ್ಮ ಸಂಘಗಳು ಸದಸ್ಯರಿಗೆ ತ್ವರಿತ ಸೇವೆ ನೀಡುವ ಮೂಲಕ ಜನರ ವಿಶ್ವಾಸಗಳಿಸಿದೆ ಎಂದರು. ಶ್ರೀ ಶನೇಶ್ವರ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ನಾಗರತ್ನ ಮಹಾಲಿಂಗ ಮಾರ್ಗೋಳಿ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿರೇಖಾ ಪಿ. ಗಣಕೀಕರಣ ಉದ್ಘಾಟಿಸಿದರು. ಬಸ್ರೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ. ಪೂಜಾರಿ, ಉದ್ಯಮಿ ರಾಜೀವ ಶೆಟ್ಟಿ ಶಿರೂರು, ಮಾರ್ಗೋಳಿ ಶ್ರೀ ಶನೇಶ್ವರ ದೇವಳದ ಮೋಕ್ತೇಶರ ಮಹಾಲಿಂಗ ಮಾರ್ಗೋಳಿ, ಕಾರ್ಯದರ್ಶಿ ಗೋವಿಂದ ಮಾರ್ಗೋಳಿ, ಸಂಘದ ಉಪಾಧ್ಯಕ್ಷೆ ಸರಸ್ವತಿ, ನಿರ್ದೇಶಕರಾದ ರತ್ನಾವತಿ, ಉಮಾ, ವಸಂತಿ ಭಾಸ್ಕರ ಗೋಳಿಹೊಳೆ, ನೇತ್ರಾವತಿ ಆನಂದ ಪೂಜಾರಿ, ಅನಿತಾ ಶರತ್‌ಚಂದ್ರ ಹಳ್ಳಿಹೊಳೆ, ಜಲಜ ಜಯರಾಮ ಗುಡ್ರಿ, ನೇತ್ರ ರಾಮ ಮೂಡ್ಲಕಟ್ಟೆ, ರೇಣುಕಾ ರವೀಂದ್ರ ಪೂಜಾರಿ, ಸೌಮ್ಯ ರವೀಂದ್ರ ಪೂಜಾರಿ, ಉಷಾ ಮಂಜುನಾಥ, ಸುಜಾತ ವಾಸುದೇವ ಉಪಸ್ಥಿತರಿದ್ದರು. ರಾಮ ಮಾರ್ಗೋಳಿ ಸ್ವಾಗತಿಸಿದರು, ಮಹೇಶ್ ನಿರೂಪಿಸಿ ವಂದಿಸಿದರು.

Exit mobile version