ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.06: ಕೆಟ್ಟು ನಿಂತಿದ್ದ ಟಿಪ್ಪರ್ ವಾಹನಕ್ಕೆ ಆಕ್ಟಿವ್ ಹೊಂಡಾ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಹಳಗೇರಿ ತೆಂಕಬೆಟ್ಟಿನ ನಿವಾಸಿ ಸತೀಶ್ ಜೋಗಿ (42) ಮೃತ ದುರ್ದೈವಿ. ಹಿಂಬದಿಯ ಸವಾರ ಕಂಬದಕೋಣೆ ಆಕಾಶ್ ಜೋಗಿ (17) ಗಂಭೀರ ಗಾಯಗೊಂಡಿದ್ದಾನೆ.
ತೆಂಕಬೆಟ್ಟು ನಿವಾಸಿ ಸತೀಶ್ ಜೋಗಿಯವರು ಸಂಬಂಧಿ ಆಕಾಶ್ ಎಂಬುವವನನ್ನು ಜೊತೆ ತೆರಳುತ್ತಿದ್ದ ವೇಳೆ ಆರೋಪಿ ಟಿಪ್ಪರ್ ಚಾಲಕ ನಜ್ರುಲ್ ಬಷೀರ್ ಎಂಬಾತ ನಿರ್ಲಕ್ಷತನದಿಂದ ಯಾವುದೇ ಮುನ್ನೆಚರಿಕೆ ಕ್ರಮವಹಿಸದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿಕೊಂಡಿದ್ದು ಟಿಪ್ಪರ್ ಲಾರಿಯ ಹಿಂಬಂದಿಗೆ ಆಕ್ಟಿವ್ ಹೊಂಡಾ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಆಕಾಶ ಜೋಗಿಯ ಮುಖ ಹಾಗೂ ತಲೆಗೆ ರಕ್ತಗಾಯ ಹಾಗೂ ಸತೀಶ ಜೋಗಿಯವರ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಆಕಾಶ ಜೋಗಿ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

