Kundapra.com ಕುಂದಾಪ್ರ ಡಾಟ್ ಕಾಂ

ಪದವಿ ವಿದ್ಯಾರ್ಥಿಗಳಿಗೆ ಶ್ರೀ ರಾಮಕೃಷ್ಣ ಕುಟೀರದ ವಿದ್ಯಾನಿಧಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಿದ್ಯಾದಾನವೆಂಬುದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆ. ಹಾಗಾಗಿ ಅದೊಂದು ಜವಾಬ್ದಾರಿಯುತ ಕೆಲಸವಾಗಿದೆ. ರಾಮಕೃಷ್ಣ ಕುಟೀರದ ಮೂಲಕ ಅದನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ಉದ್ಯಮಿ ಸದಾನಂದ ಪ್ರಭು ಹೇಳಿದರು.

ಅವರು ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ವಿವಿಧ ಪದವಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ಇಂದು ಪಡೆದ ಸಹಾಯದಿಂದ ಉತ್ತಮ ಪದವಿ ಗಳಿಸಿ ಮತ್ತಷ್ಟು ಜನರಿಗೆ ಸಹಕಾರ ಮಾಡುವಂತಾದರೆ ವಿದ್ಯಾನಿಧಿ ಯೋಜನೆ ಸಾರ್ಥಕ್ಯ ಪಡೆದುಕೊಳ್ಳುತ್ತದೆ ಎಂದರು.

ಈ ವೇಳೆ ಪ್ರಶಾಂತ್ ಶೆಣೈ ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಸ್ವಾಗತಿಸಿ, ಜ್ಯೋತಿ ಎಚ್. ಎಸ್. ವಂದಿಸಿದರು.

Exit mobile version