Kundapra.com ಕುಂದಾಪ್ರ ಡಾಟ್ ಕಾಂ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾನ್ವಿ ಶೆಟ್ಟಿಗೆ ರ್ಯಾಂಕ್, ಶೇ.99 ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಾನ್ವಿ ಶೆಟ್ಟಿ 593 (ಶೇ.99) ಅಂಕ ಪಡೆದು ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ್ದಾಳೆ. ಪಿಸಿಎಂನಲ್ಲಿ ಶೇ.99.75 ಅಂಕ ಗಳಿಸಿದ್ದಾಳೆ.

ಬೆಂಗಳೂರು ಕುಮಾರನ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಸಾನ್ವಿ ಶೆಟ್ಟಿ, ಮೂಲತಃ ಶಂಕರನಾರಾಯಣದ ದೊಣಗೇರಿ ದೊಡ್ಡಮನೆಯವಳಾಗಿದ್ದು, ವಿನಯ ಶೆಟ್ಟಿ ಪಡುಬೆಟ್ಟು ಬೀಡು ಹಾಗೂ ಪ್ರೀತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ. ವಿವಿಧ ಸಂಗೀತ ಸ್ವರ್ಧೆಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಸಾನ್ವಿ ಉತ್ತಮ ಹಾಡುಗಾರ್ತಿಯಾಗಿ ಗುರುತಿಸಿಕೊಂಡಿದ್ದು, ಇದೀಗ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಶೈಕ್ಷಣಿಕವಾಗಿಯೂ ಸಾಧನೆ ಮಾಡಿದ್ದಾಳೆ.

Exit mobile version