Kundapra.com ಕುಂದಾಪ್ರ ಡಾಟ್ ಕಾಂ

ಸಿದ್ಧಾಪುರ: ವಾಟ್ಸಪ್ ಸ್ಟೇಟಸ್‌ಗೆ ಕಾಮೆಂಟ್ ಮಾಡಿದ್ದಕ್ಕೆ ಹಲ್ಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೊಬೈಲ್ ವಾಟ್ಸಪ್ ಸ್ಟೇಟಸ್‌ಗೆ ಕಾಮೆಂಟ್ ಹಾಕಿದ್ದಕ್ಕೆ ಆರೋಪಿಗಳು ವ್ಯಕ್ತಿಯನ್ನು ಸಿದ್ದಾಪುರಕ್ಕೆ ಕರೆಯಿಸಿ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಆಜ್ರಿ ಗ್ರಾಮದ ತೆಂಕಬೈಲು ರಾಘವೇಂದ್ರ ಕುಲಾಲ (27) ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಆರೋಪಿ ಮೃತ್ಯುಂಜಯ ಮೂರು ದಿನದ ಹಿಂದೆ ತನ್ನ ಮೊಬೈಲ್‌ನಲ್ಲಿ ವಾಟ್ಸ್ ಆ್ಯಪ್ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದರು. ಸ್ಟೇಟಸ್‌ಗೆ ರಾಘವೇಂದ್ರ ಕುಲಾಲ ಕಾಮೆಂಟ್ ಹಾಕಿದ್ದರು. ಈ ವಿಷಯಕ್ಕೆ ಆರೋಪಿಗಳಾದ ಕಮಲಾಕರ ಹಾಗೂ ವಿಕಾಸ್ ಜೂ. 19ರಂದು ಮೊಬೈಲ್ ಮೂಲಕ ಬೆದರಿಕೆ ಹಾಕಿದ್ದರು. ಅನಂತರ ಪ್ರದೀಪ ಮತ್ತು ಅರುಣ್ ಶೆಟ್ಟಿ, ರಾಘವೆಂದ್ರ ಅವರಿಗೆ ಮೊಬೈಲ್ ಕರೆ ಮಾಡಿ ಸಿದ್ದಾಪುರಕ್ಕೆ ಬರುವಂತೆ ಹೇಳಿದ್ದರು.

ಆರೋಪಿಗಳು ರಾಘವೇಂದ್ರ ಕುಲಾಲ ಅವರನ್ನು ಪೇಟೆಯಿಂದ ಸರಕಾರಿ ಪ್ರೌಢಶಾಲೆಯ ಮೈದಾನಕ್ಕೆ ಕರೆಯಿಸಿಕೊಂಡು, ಮತ್ತೊಂದಷ್ಟು ಜನರನ್ನು ಸೇರಿಸಿ ಗಂಭೀರವಾಗಿ ಹಲ್ಲೆ ಮಾಡಿದ್ದರು. ಮರದ ದೊಣ್ಣೆ, ಚಾಕುವಿನಿಂದ, ಕಾಲಿನಿಂದ ತುಳಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Exit mobile version