Site icon Kundapra.com ಕುಂದಾಪ್ರ ಡಾಟ್ ಕಾಂ

ಪಿಯುಸಿಯಲ್ಲಿ ರ್ಯಾಂಕ್ ವಿಜೇತ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 12 ವಿದ್ಯಾರ್ಥಿಗಳು ರಾಜ್ಯಮಟ್ಟದ ರ‍್ಯಾಂಕ್ ಪಡೆದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿಜ್ಞಾನ ವಿಭಾಗದಲ್ಲಿ ಮೈತ್ರೆಯಿ ೫ ನೇ ರ‍್ಯಾಂಕ್, ಮನೀಷ್ ಆರ್ ಹೆಬ್ಬಾರ್ ೭ ನೇ ರ‍್ಯಾಂಕ್, ಪ್ರಾಚಿ ಎನ್. ೯ನೇ ರ‍್ಯಾಂಕ್, ಯು. ಕಾರ್ತಿಕ್ ಐತಾಳ್ ೧೦ ನೇ ರ‍್ಯಾಂಕ್, ವಾಣಿಜ್ಯ ವಿಭಾಗದಲ್ಲಿ ದೀಕ್ಷಾ ಭಟ್ ಮತ್ತು ಪಂಚಮಿ ಕಿಣಿ ೫ ನೇ ರ‍್ಯಾಂಕ್, ಶ್ರೀಶ ೬ ನೇ ರ‍್ಯಾಂಕ್, ಕೃತಿಕಾ ೭ ನೇ ರ‍್ಯಾಂಕ್, ಅದಿತಿ ಮತ್ತು ಶೃದ್ಧಾ ಬಿ ಸಾಲಿಯಾನ್ ೮ ನೇ ರ‍್ಯಾಂಕ್, ದೇವಾಡಿಗ ಅಂಜಲಿ ಚಂದ್ರ ಮತ್ತು ರಕ್ಷಿತಾ ಆನಂದ ಪೂಜಾರಿ ೯ ನೇ ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈಯವರು ಅಭಿನಂದನಾಪೂರ್ವಕವಾಗಿ ಶಾಲು ಹೊದಿಸಿ, ಫಲಪುಷ್ಪ, ಬೆಳ್ಳಿಲೋಟ, ಬೆಳ್ಳಿ ನಾಣ್ಯ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ರಾಗಿಣಿ, ವೆಂಕಟರಮಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ ಶ್ಯಾನುಭಾಗ್, ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಹಿರಿಯ ರಸಾಯನಶಾಸ್ತ್ರ ಉಪನ್ಯಾಸಕರಾದ ರಮಾಕಾಂತ ರೇವಣ್‌ಕರ್ ಉಪಸ್ಥಿತರಿದ್ದರು.

ಗಣಿತಶಾಸ್ತ್ರ ಉಪನ್ಯಾಸಕ ಸುಜೇಯ ಸ್ವಾಗತಿಸಿ, ರಸಾಯನಶಾಸ್ತ್ರ ಉಪನ್ಯಾಸಕ ಸಂದೀಪ್ ಗಾಣಿಗ ವಂದಿಸಿ, ಇಂಗ್ಲೀಷ್ ಉಪನ್ಯಾಸಕ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

Exit mobile version