Site icon Kundapra.com ಕುಂದಾಪ್ರ ಡಾಟ್ ಕಾಂ

ಗೋಪಾಡಿ: ರೋಟರಿ ಕುಂದಾಪುರ ದಕ್ಷಿಣ – ಆಶ್ರಯ ಯೋಜನೆಯಡಿ ಮನೆ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಟೇಶ್ವರದ ಗೋಪಾಡಿಯ ಮೀನುಗಾರ ಗೋಪಾಲರ ಮನೆ ಸಂಪೂರ್ಣವಾಗಿ ಅಜೀರ್ಣಾವಸ್ಥೆಯಲ್ಲಿರುವುದನ್ನು ಗಮನಿಸಿ ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನೂತನವಾಗಿ ಮನೆಯನ್ನು ಕಟ್ಟಿಸಿ ಅವರಿಗೆ ಹಸ್ತಾಂತರಿಸಲಾಯಿತು.

ನೂತನ ಮನೆಯನ್ನು ಮಾಜಿ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ ಉದ್ಘಾಟಿಸಿದರು. ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ ಶೆಟ್ಟಿ ವೈ, ಮಖ್ಯ ಅತಿಥಿಯಾಗಿ ಆಗಮಿಸಿದ್ದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಮಹೇಂದ್ರ ಶೆಟ್ಟಿ ಮನೆ ಹಸ್ತಾಂತರಿಸಿದರು. ಇನ್ನರ್ ವೀಲ್ ಕ್ಲಬ್‌ನ ಶಾಂತಾ ಕಾಂಚನ್ ಉಪಸ್ಥಿತರಿದ್ದರು. ರೋಟರಿ ಸದಸ್ಯರು “ಆಶ್ರಯ” ಯೋಜನೆಯಡಿ ನೂತನ ಮನೆ ಪಡೆದ ಕುಟುಂಬಕ್ಕೆ ಶುಭ ಹಾರೈಸಿದರು.

Exit mobile version