ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜು.8: ಜಿಲ್ಲೆಯಲ್ಲಿ ಜುಲೈ 1ರಿಂದ ಈತನಕ ಇದುವರೆಗೆ 832 ಮಿಮಿ ಮಳೆಯಾಗಿದೆ. ಪ್ರತಿವರ್ಷ ವಾಡಿಕೆ ಮಳೆ 367 ಮಿಮಿ ಇರುತ್ತಿತ್ತು. ಜು.7ರಂದು 127.8 ಮಿ.ಮೀ .ಮಳೆಯಾಗಿದ್ದು, ಕುಂದಾಪುರ – 109.3 ಮಿ.ಮೀ, ಬೈಂದೂರು – 126.1 ಮಿ.ಮೀ, ಹೆಬ್ರಿ – 136.2 ಮಿ .ಮೀ , ಉಡುಪಿ – 78.3, ಬ್ರಹ್ಮಾವರ – 81.5, ಕಾಪು – 65.3, ಕಾರ್ಕಳ – 120.4 ಮಿ.ಮೀ ಮಳೆಯಾಗಿದೆ. ಅತಿವೃಷ್ಟಿಗೆ ಒಟ್ಟು ಅಂದಾಜು 24.73 ಕೋಟಿಯಷ್ಟು ನಷ್ಟವಾಗಿದೆ.
ಅತಿವೃಷ್ಟಿಯಿಂದಾಗಿ 250 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ 93 ಕಿಲೋಮೀಟರ್, ಗ್ರಾಮೀಣ ಭಾಗದ 685 ಕಿಲೋಮೀಟರಿನಷ್ಟು ರಸ್ತೆ, ಜಿಲ್ಲಾ ಹಾಗೂ ರಾಜ್ಯಮಟ್ಟದ 7.5 ಕಿಮೀ ಮುಖ್ಯ ರಸ್ತೆ ಹಾಳಾಗಿದ್ದು, 13 ಸೇತುವೆಗಳು ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ 1515 ವಿದ್ಯುಚ್ಛಕ್ತಿ ಕಂಬಗಳು ಬಿದ್ದುಹೋಗಿವೆ, 47 ಕಿಲೋಮೀಟರ್ ರಷ್ಟು ವಿದ್ಯುತ್ ತಂತಿಗಳು ಹಾಳಾಗಿದ್ದು, 64 ಮನೆಗಳಿಗೆ ಭಾಗಶಃ ಹಾನಿಯಾಗಿ ಒಟ್ಟು ಅಂದಾಜು 24.73 ಕೋಟಿಯಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಕೂಡ ನಿರಂತರವಾಗಿ ಮಳೆ ಮುಂದುವರೆದಿದ್ದು, ನಷ್ಟದ ನಿಖರ ಮೊತ್ತ ಮೌಲ್ಯಮಾಪನ ಮಾಡಲು ಅಸಾಧ್ಯ ವಾಗಿದ್ದು, ನಷ್ಟದ ಪ್ರಮಾಣ ಇನ್ನೂ ಹೆಚ್ಹುವ ಸಾಧ್ಯತೆಗಳಿವೆ.