Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಬಡವರ ಡಾಕ್ಟರ್ ಖ್ಯಾತಿಯ ಡಾ. ಎ.ಎಸ್. ಕಲ್ಕೂರ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬಡವರ ಡಾಕ್ಜರ್ ಎಂದೇ ತಾಲೂಕಲ್ಲಿ ಪ್ರಸಿದ್ದರಾಗಿದ್ದ ಜನಾನುರಾಗಿ ಹಂಗಳೂರಿನ ವೈದ್ಯ ಡಾ. ಎ.ಎಸ್. ಕಲ್ಕೂರು (87) ಅಂಕದಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದರು.

ಡಾ.ಕಲ್ಕೂರ ಕಾಲೇಜ್ ವಿದ್ಯಾಭ್ಯಾಸದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಮಸಿಸ್ಟಾಗಿ ವೃತ್ತಿಜೀವನ ಆರಂಭಿಸಿದರು. ವೈದ್ಯರಾಗಿ ಸೇವೆ ಮುಂದುವರಿಸಿ ನಂತರ ಕೆಲಸಕ್ಕೆ ರಾಜಿನಾಮೆ ನೋಡಿ ಕುಂದಾಪುರ ಮುಖ್ಯರಸ್ತೆಯಲ್ಲಿ ಕ್ಲಿನಿಕ್ ತೆರೆದು ವೈದ್ಯ ವೃತ್ತಿ ಆರಂಭಿಸಿದರು. 53 ವರ್ಷ ಕುಂದಾಪುರಲ್ಲಿ ವೈದ್ಯವೃತ್ತಿ ನಂತರ ವಯಸ್ಸಿನ ಹಿನ್ನೆಲೆಯಲ್ಲಿ ಕ್ಲಿನಿಕ್ ಬಂದ ಮಾಡಿ ವಿಶ್ರಾಂತ ಜೀವನ ಸಾಗಿಸುತ್ತಿದ್ದರು. ಇವರು ಕನಿಷ್ಟ 5 ಹಾಗೂ ಗರಿಷ್ಟ 30 ರೂ.ಗಿಂತ ಹೆಚ್ಚಿಗೆ ಶುಲ್ಕ ತೆಗೆದುಕೊಂಡ ದಾಖಲೆಯೇ ಇಲ್ಲ.

ಕುಂದಾಪುರದಲ್ಲಿ ಕಡಿಮೆ ಆಸ್ಪತ್ರೆ ವೈದ್ಯರಿದ್ದ ಕಾಲದಲ್ಲಿ ಕೇವಲ ಮಾತ್ರೆ, ಶಿರಪ್ ಮೂಲಕ ನೂರಾರು ಜನರ ಪ್ರಾಣ ಉಳಿಸಿದ್ದು, ಏನಾದರು ಅನಾರೋಗ್ಯ ಕಾಣಿಸಿಕೊಂಡರೆ ಕಲ್ಕೂರು ಡಾಕ್ಟರ್ ಹತ್ರ ಹೋದ್ರೆ ಗುಣ ಮಾಡ್ತ್ರು ಎನ್ನುವಷ್ಟು ಪ್ರಸಿದ್ದರಾಗಿದ್ದರು.

ನಾಟಕ ಕಲಾವಿದರು, ಯಕ್ಷಗಾನ ಪ್ರೇಮಿಯಾಗಿದ್ದು, ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಆಸಕ್ತರಾಗಿದ್ದರು. ಮೃತರ ಒರ್ವ ಪುತ್ರ ಹಾಗೂ ಮೂವರು ಪುತ್ರಿಯರ ಅಗಲಿದ್ದಾರೆ.

Exit mobile version