ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ವತಿಯಿಂದ ತನ್ನ ಸಾಮಾಜಿಕ ಜವಾಬ್ದಾರಿ ಚಟುವಟಿಕೆಯಡಿ ಹಾರಾಡಿಯ ಡಯಾಲಿಸಿಸ್ ಕೇಂದ್ರಕ್ಕೆ ಎರಡು ಐಸಿಯು ಬೆಡ್ಗಳನ್ನು ಕೊಡುಗೆಯಾಗಿ ನೀಡಿತು.

ಹಾರಾಡಿಯಲ್ಲಿರುವ ಡಯಾಲಿಸಿಸ್ ಕೇಂದ್ರವನ್ನು ರೋಟರಿ ಕ್ಲಬ್ ಬ್ರಹ್ಮಾವರ ಅವರ ಸುವರ್ಣ ಮಹೋತ್ಸವ ಯೋಜನೆಯ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಲಾಗಿದ್ದು ಇದನ್ನು ಡಾ. ಎ.ವಿ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ನಿರ್ವಹಿಸುತ್ತದೆ.
ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ಸಂಸ್ಥೆಗಳ ಫಿಸಿಯೋಕೇರ್, ಫಿಸಿಯೋಥೆರಪಿ ಮತ್ತು ಪುನರ್ವಸತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಎರಡು ಐಸಿಯು ಹಾಸಿಗೆಗಳನ್ನು ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಶಶಿಧರ ಶೆಟ್ಟಿ ಹಸ್ತಾಂತರಿಸಲಾಯಿತು. ಡಾ. ಪಿ. ವಿ. ಭಂಡಾರಿ ಮತ್ತು ರೋಟರಿ ಕ್ಲಬ್ ಬ್ರಹ್ಮಾವರ ಸದಸ್ಯರು, ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ಸಂಸ್ಥೆಯ ಪಾಲುದಾರ ರವೀಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.