Kundapra.com ಕುಂದಾಪ್ರ ಡಾಟ್ ಕಾಂ

ತಾಜ್ ಮಿಸ್ ಯುನಿವರ್ಸ್ ಸ್ವರ್ಧೆ ವಿಜೇತರಾದ ಆನಗಳ್ಳಿ ಸಂಗೀತಾ ಹೊಳ್ಳ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಆನಗಳ್ಳಿ ಗ್ರಾಮದ ನಿವಾಸಿ ಡಾ. ಸಂಗೀತಾ ಹೊಳ್ಳ ತಾಜ್ ಮಿಸ್ ಯುನಿವರ್ಸ್ 2022 ಸ್ವರ್ಧೆಯಲ್ಲಿ ವಿಜೇತರಾಗಿದ್ದಾರೆ.

ಎನ್ಎಂಸಿ ಕಂಪನಿಯಲ್ಲಿ ಡಾಟಾ ಸೈಂಟಿಸ್ಟ್ ಆಗಿರುವ ಡಾ. ಸಂಗೀತಾ ಹೊಳ್ಳ, ಉತ್ತರಪ್ರದೇಶದ ಆಗ್ರಾ ಕ್ರಿಸ್ಟಲ್ ಸರೋವರ್ ಪ್ರೀಮಿಯರ್ ಹೋಟೆಲ್ನಲ್ಲಿ ಕಳೆದ ತಿಂಗಳು ನಡೆದ ತಾಜ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಶ್ವ ಸುಂದರಿ ವಿಭಾಗದಲ್ಲಿ 25 ಮಂದಿ ಭಾಗವಹಿಸಿದ್ದು, ಸಂಗೀತಾ ಅಂತಿಮ ಸುತ್ತುಗೆ ಆಯ್ಕೆಯಾಗಿದ್ದರು. ಅವರು ಮಿಸ್ ಯುನಿವರ್ಸ್ 2022 ಮತ್ತು ಮಿಸ್ ಯುನಿವರ್ಸ್ ಬ್ಯೂಟಿ ವಿತ್ ಬ್ರೈನ್ ಎಂಬ 2 ಪ್ರಶಸ್ತಿ ಗೆದ್ದಿದ್ದರು.

ಈಕೆ ಕುಂದಾಪುರ ಆನಗಳ್ಳಿಯ ಕರ್ಣಾಟಕ ಬ್ಯಾಂಕ್ ಬೆಂಗಳೂರು ಉದ್ಯೋಗಿ ಲಕ್ಷ್ಮೀನಾರಾಯಣ ಹೊಳ್ಳ ಮತ್ತು ದಿ. ನಿರ್ಮಲಾ ಹೊಳ್ಳ ಅವರ ಪುತ್ರಿ.

ಆಹಾರ, ವಸತಿ ಮತ್ತು ಮುಖ್ಯವಾಗಿ ಶಿಕ್ಷಣವಿಲ್ಲದೆ ಭಿಕ್ಷೆ ಬೇಡುವ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವ ಬಯಕೆ ಇದೆ. ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಬೇಕು. ಮೂಲಭೂತ ಶಿಕ್ಷಣ ಮುಖ್ಯವಾಗಿದ್ದು, ಅಜ್ಞಾನದ ಗೋಡೆ ಒಡೆದು ಸುಜ್ಞಾನದ ಕಡೆ ನಡೆಸುವುದಾದೇ ಗುರಿ ನನ್ನದು – ಡಾ. ಸಂಗೀತಾ, ತಾಜ್ ಮಿಸ್ ಯೂನಿವರ್ಸ್ 2022 ವಿಜೇತೆ.

Exit mobile version