Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಶಿಕ್ಷಪ್ರಭ ಅಕಾಡೆಮಿಗೆ ಉತ್ತಮ ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಿಎ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯ ವಿದ್ಯಾರ್ಥಿಗಳು ಮೇ 2022ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ಉತ್ತಮ ಸಾಧನೆಗೈದಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಕಿರಣ್ ಕಾಮತ್ (273), ಸುಪ್ರೀತಾ (246), ಜಸ್ವಿಟಾ ಡಿಸೋಜಾ (235), ಅಭಿಷೇಕ್ ಶೆಟ್ಟಿ (219), ಮನೋಜ್ ಶೆಟ್ಟಿ (209), ಅಶ್ವಿನ್ ಸಿ ಶೆಟ್ಟಿ (205), ಸ್ನೇಹ ದೇವಾಡಿಗ (203), ಬಿ ಪ್ರತಿಮಾ (200), ಮಂದಾರ (200), ಶಮಂತ್ ಕೊಠಾರಿ (200) ಅಂಕಗಳಿಸುವುದರೊಂದಿಗೆ ಇಂಟರ್ಮಿಡಿಯೆಟ್ ಪ್ರಥಮ ಗ್ರೂಪ್ ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಂಕಿತ ವಿ ಶೆಟ್ಟಿ(200), ಸಿಂಚನ ಶೆಟ್ಟಿ (200) ಸಿಎ ಇಂಟರ್ಮೀಡಿಯಟ್‌ನ ದ್ವಿತೀಯ ಗ್ರೂಪ್ ಉತ್ತೀರ್ಣ ಹೊಂದುವುದರ ಮೂಲಕ ಸಿಎ ಅಂತಿಮ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಭವಿ ಬೋಧಕ ಸಿಬ್ಬಂದಿಗಳಿಂದ ನಿರಂತರ ಆರು ತಿಂಗಳು ಸಿಎ ಇಂಟರ್ಮೀಡಿಯಟ್ ತರಬೇತಿ ನೀಡಿ ಅತಿ ಹೆಚ್ಚು ಪೂರಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸುತ್ತ ಅಖಿಲ ಭಾರತ ಮಟ್ಟದಲ್ಲಿ ಕೇವಲ 12% ಫಲಿತಾಂಶ ಇದ್ದರೂ ನಮ್ಮ ಸಂಸ್ಥೆಯಲ್ಲಿ 35% ಅಧಿಕ ಫಲಿತಾಂಶ ತಂದಿರುವುದು ನಮ್ಮ ವಿದ್ಯಾರ್ಥಿಗಳ ಶ್ರಮ, ಬೋಧಕ ಸಿಬ್ಬಂದಿಗಳ ಅವಿರತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದರು.

“ಶಿಕ್ಷ ಪ್ರಭ ಸಂಸ್ಥೆಯ ನುರಿತ ಶಿಕ್ಷಕರ ತರಬೇತಿ ಹಾಗೂ ಮಾರ್ಗದರ್ಶನದಿಂದಾಗಿ ನಾನು ಸಿಎ ಇಂಟರ್ಮೀಡಿಯಟ್ ಪ್ರಥಮ ಗ್ರೂಪ್ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದೇನೆ. ದೇವರ ಹಾಗೂ ತಂದೆ ತಾಯಿಯ ಆಶೀರ್ವಾದದಿಂದ ನನಗೆ ಈ ಸಫಲತೆ ದೊರೆಯಿತು. ನನಗೆ ಸಹಕರಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.” – ಕಿರಣ್ ಕಾಮತ್(273)

Exit mobile version