ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಮೆಮೊರಿಯಲ್ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್ ‘ಎಲ್ ಡೊರಾಡೊ ಎನ್-ನಿಗ್ಮ-2022’ನಲ್ಲಿ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗವು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಹ್ಯೂಮನ್ ರಿಸೋರ್ಸ್‌ನಲ್ಲಿ ವಿಕ್ರಮ್ ಪ್ರಥಮ, ರಸಪ್ರಶ್ನೆಯಲ್ಲಿ ಮೊಹಮ್ಮದ್ ಆಝೀಬ್ ಹಾಗೂ ಮೊಹಮ್ಮದ್ ಮುಝಾಮಿಲ್ ದ್ವಿತೀಯ, ಸೈಬರ್ ಕ್ವೆಸ್ಟ್‌ನಲ್ಲಿ ತುಷಾರ್ ಪ್ರಥಮ, ಸಮೂಹ ಗಾಯನದಲ್ಲಿ ಸತ್ಯಜಿತ್ ಹಾಗೂ ತಂಡ ಪ್ರಥಮ, ಗಾಯನದಲ್ಲಿ ಗ್ರೀಷ್ಮಾ ಪ್ರಥಮ, ರೋಡಿಸ್‌ನಲ್ಲಿ ನಟರಾಜ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲ ಡಾ. ಕುರಿಯನ್ ಅಭಿನಂದಿಸಿದ್ದಾರೆ.