Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ‘ನವ್ಯತಾ’ – ಫ್ಯಾಷನ್ ವಸ್ತುಗಳ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಕಾಲೇಜಿನ ಬಿಎಸ್ಸಿ ಫ್ಯಾಷನ್ ಡಿಸೈನಿಂಗ್ ವಿಭಾಗದ ವತಿಯಿಂದ ’ನವ್ಯತಾ’ ಫ್ಯಾಷನ್ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ಫೆವಿಕ್ರಿಲ್ ಸಂಸ್ಥೆಯ ಸಂಗಮೇಶ್ ಮಾತನಾಡಿ, ಬದಲಾಗುತ್ತಿರುವ ಜಗತ್ತಿನ ಪರಿಸ್ಥಿತಿಗೆ ಅನುಗುಣವಾಗಿ ನೂತನ ಆವಿ?ರಗಳು ಹುಟ್ಟಿಕೊಳ್ಳುತ್ತವೆ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಅವುಗಳನ್ನು ಅಳವಡಿಸಿಕೊಳ್ಳುವ ಮನೋಭಾವವೂ ಇರಬೇಕು. ಫ್ಯಾ?ನ್ ಕ್ಷೇತ್ರದಲ್ಲಿ ಹೊಸ ರೀತಿಯ ಪ್ರಯೋಗಗಳಿಗೆ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು ಅದರ ಸದುಪಯೋಗಗೊಳಿಸಬೇಕೆಂದರು. ಆಳ್ವಾಸ್ ವಿದ್ಯಾರ್ಥಿಗಳು ಹಿಂದೆ ನಡೆದ ಕಾರ್ಯಾಗಾರದಿಂದ ಕಲಿತು ತಯಾರಿಸಿದ ವಸ್ತ್ರ ವಿನ್ಯಾಸಗಳನ್ನು ಗಮನಿಸಿ, ಫೆವಿಕ್ರಿಲ್ ಸಂಸ್ಥೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಾಗಿ ಘೋಷಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿದಿನದ ಮ್ಯಾನೇಜ್ಮೆಂಟ್ ಟ್ರಸ್ಟಿ, ವಿವೇಕ್ ಆಳ್ವ ಮಾತನಾಡಿ, ಪ್ರಸ್ತುತ ಕ್ಷೇತ್ರವು ಡಿಜಿಟಲ್ ನತ್ತ ಸಾಗುತ್ತಿರುವುದರಿಂದ ಫ್ಯಾ?ನ್ ಡಿಸೈನಿಂಗ್ ಮಾರುಕಟ್ಟೆಯ ವ್ಯಾಪ್ತಿ ವಿಸ್ತರಿಸಿದೆ. ವಿದ್ಯಾರ್ಥಿಗಳು ಒಂದೇ ವಿಷಯಕ್ಕೆ ಸೀಮಿತವಾಗದೇ ಕಲಿಕೆಯ ಜತೆಗೆ ಆದಾಯವನ್ನು ಗಳಿಸುವುದರತ್ತ ಗಮನಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ 10 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ 32 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಯಿತು. ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಂಪ್ ವಾಕ್ ನಡೆಸಿಕೊಟ್ಟರು.

ಫೆವಿಕ್ರಿಲ್ ಸಂಸ್ಥೆಯ ಪುಪ್ಪಾಂಜಲಿ ರಾವ್, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗ ಮುಖ್ಯಸ್ಥೆ ಸವಿತಾ ಶ್ರೀನಿವಾಸ್, ಉಪನ್ಯಾಸಕಿ ಪದ್ಮಪ್ರಿಯ, ವಿದ್ಯಾರ್ಥಿ ಸಂಯೋಜಕರಾದ ಜ್ಯೋತಿ, ಶಿಫಾ ಉಪಸ್ಥಿತರಿದ್ದರು. ಶರಧಿ ಸುಚೇಂದ್ರ ಸ್ವಾಗತಿಸಿ, ಮೇಘನಾ ವಂದಿಸಿ, ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

Exit mobile version