Kundapra.com ಕುಂದಾಪ್ರ ಡಾಟ್ ಕಾಂ

ಲಾಡ್ಜಿಗೆ ತೆರಳಿದ್ದ ಅನ್ಯಕೋಮಿನ ಜೋಡಿಗೆ ಸಾರ್ವಜನಿಕರಿಂದ ಹಲ್ಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.22:
ತಾಲೂಕಿನ ಉಪ್ಪುಂದದ ಲಾಡ್ಜಿಗೆ ತೆರಳಿದ್ದ ಅನ್ಯಕೋಮಿನ ಜೋಡಿಗೆ ತಡೆದ ಸಾರ್ವಜನಿಕರು ಥಳಿಸಿ ಬೈಂದೂರು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಶುಕ್ರವಾರ ನಡದಿದೆ.

ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಗುಜುರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಮೀರ್ ಆಲಿ (45) ಎಂಬಾತ ಎರ್ಟಿಕಾ ಕಾರಿನಲ್ಲಿ ಹಿಂದೂ ಧರ್ಮದ ಸುಮಾರು 28 ವರ್ಷದ ಯುವತಿಯೊಂದಿಗೆ ಉಪ್ಪುಂದದ ಲಾಡ್ಜಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವಿಚಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ತಿಳಿದು ಹೋಟೆಲಿಗೆ ಬಂದಿದ್ದು, ಗಲಾಟೆ ಆರಂಭವಾಗಿದೆ. ಗಲಾಟೆ ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ಜೋಡಿ ಕೋಣೆಯಿಂದ ಹೊರ ಬಂದು ಕಾರಿನಲ್ಲಿ ಹೊರಡಲು ಯತ್ನಿಸಿದ್ದಾರೆ. ಈ ಸಂದರ್ಭ ಹೊರಗಡೆ ಸೇರಿದ ಗುಂಪು ಥಳಿಸಿದೆ. ಬಳಿಕ ಪೊಲೀಸರಿಗೆ ಸುದ್ಧಿ ಮುಟ್ಟಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಯುವತಿ ಅಮೀರ್ ಆಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವಿಚಾರಣೆಯ ತಿಳಿದುಬಂದಿದೆ. ಯುವತಿಯ ಮನೆಯವರಿಗೆ ಪೊಲೀಸರು ಮಾಹಿತಿ ನೀಡಿದ್ದು ಯುವತಿಯ ಮನೆಯವರು ಬೈಂದೂರು ಠಾಣೆಗೆ ಬಂದು ರಾಜಿಯಲ್ಲಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ ಎನ್ನಲಾಗಿದೆ.

Exit mobile version