Kundapra.com ಕುಂದಾಪ್ರ ಡಾಟ್ ಕಾಂ

ಬಿಡುಗಡೆಗೆ ಸಿದ್ಧಗೊಂಡ ಟೀಮ್ ಕಲತ್ವ ಸಿರಿ ತಂಡದ ‘ಸಾಗರಿಕ’ ಮ್ಯೂಸಿಕಲ್ ಫಿಲಂ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ಆಲ್ಬಂ ವೀಡಿಯೋ ಮೂಲಕ ಜನಮನ್ನಣೆ ಗಳಿಸಿದ್ದ ಟೀಮ್ ಕಲತ್ವ ಸಿರಿ ಪ್ರೊಡಕ್ಷನ್ಸ್, ಇದೀಗ ಮ್ಯೂಸಿಕಲ್ ಫಿಲಂ ಮೂಲಕ ಕಥೆಯೊಂದನ್ನು ಹೇಳಲು ಸಜ್ಜಾಗಿದೆ. ‘ಸಾಗರಿಕ’ ಎಂಬ ಕನ್ನಡ ಮ್ಯೂಸಿಕಲ್ ಫಿಲ್ಮ್ ಮೂಲಕ ಮತ್ತೆ ರಂಜಿಸಲು ಬಂದಿರುವ ತಂಡ ಈಗಾಗಲೇ ಆಡಿಯೋ ಬಿಡುಗಡೆಗೊಳಿಸಿದ್ದು ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ.

ಚೊಚ್ಚಲ ನಿರ್ದೇಶನದ ಹೊಣೆ ಹೊತ್ತಿರುವ ಮನೀಶ್ ಮೊಯ್ಲಿ ಈ ಬಾರಿ ಸಾಹಿತ್ಯ ಹಾಗೂ ನಿರ್ದೇಶನವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆ. ಪಿ. ಮಿಲನ್ ಈ ಮ್ಯೂಸಿಕಲ್ ಫಿಲಂಗಾಗಿ ಹಾಡಿದ್ದಾರೆ. ರವಿರಾಜ್ ಪೂಜಾರಿ ಹಾಗೂ ರಶ್ಮಿ ಭಟ್ ಇದರಲ್ಲಿ ನಟಿಸಿದ್ದಾರೆ. ಸಚಿನ್ ಶೆಟ್ಟಿ ಮಾರ್ಕೆಟಿಂಗ್ ಅಡ್ಡ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಮ್ಯೂಸಿಕಲ್ ಫಿಲಂಗೆ ಸಚಿನ್ ಶೆಟ್ಟಿ ನಿರ್ಮಾಪಕರಾಗಿದ್ದಾರೆ.

ಈ ಮ್ಯೂಸಿಕಲ್ ಫಿಲಂ ಈಗಾಗಲೇ ಬೆಂಗಳೂರಿನ ಸುಚಿತ್ರ ಫಿಲಂ ಅಕಾಡಮಿಯಲ್ಲಿ ಸತತವಾಗಿ 3 ಪ್ರಿಮಿಯರ್ ಶೋ ಪ್ರದರ್ಶನ ಕಂಡು ಜನರ ಮೆಚ್ಚುಗೆಯನ್ನ ಪಡೆದಿದೆ. ಶೀತಲ್ ಎಸ್.ಎಂ ಅವರ ಹಿನ್ನಲೆ ಧ್ವನಿ ಹಾಗೂ ಸನತ್ ಉಪ್ಪುಂದರವರ ಕ್ಯಾಮರಾ ಕೈಚಳಕವಿರುವುದು ಚಿತ್ರದಲ್ಲಿದೆ. ಶಿವು ಕುಂದಾಪುರ ಕ್ರಿಯೆಟಿವ್ ಹೆಡ್ ಆಗಿ ಹಾಗೂ ನಿತೀಶ್ ಭಾರದ್ವಾಜ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೀಶ ಉಪ್ಪುಂದ ಪೋಸ್ಟರ್ ಡಿಸೈನ್ ಮಾಡಿದ್ದಾರೆ.

ಸಾಗರಿಕಾ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹಾಗೂ ಭಾರತೀಯ ಜನಪ್ರಿಯ ಆಡಿಯೋ ಪ್ಲಾಟ್ ಫಾರ್ಮ್ಗಳಾದ ವಿಂಕ್ ಮ್ಯೂಸಿಕ್, ಗಾನ, ಜಿಯೋ ಸಾವ್ನ್, ಆಮೇಜಾನ್ ಪ್ರೈಮ್ ಮ್ಯೂಸಿಕ್ ಹಾಗೂ ಸ್ಪೋಟಿಫೈ ಮ್ಯೂಸಿಕ್’ನಲ್ಲಿ 2 ಲಕ್ಷಕ್ಕೂ ಅಧಿಕ ಭಾರಿ ಕೇಳಲ್ಪಟ್ಟಿದೆ.

ಆಡಿಯೋ ಸಾಂಗ್ ಮೂಲಕ ಟ್ರೆಂಡ್ ಸೆಟ್ ಮಾಡಿ ನಿರೀಕ್ಷೆ ಹೆಚ್ಚಿಸಿರುವ ಟೀಮ್ ಕಲತ್ವ ಸಿರಿ ತಂಡದ ಸಾಗರಿಕ ಮ್ಯೂಸಿಕಲ್ ಫಿಲಂ ಅಗಸ್ಟ್ 6ರ ಶನಿವಾರ ಟೀಮ್ ಕಲತ್ವ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

Exit mobile version