Kundapra.com ಕುಂದಾಪ್ರ ಡಾಟ್ ಕಾಂ

ಸಂಶೋಧನೆ ಕೇವಲ ತಾಂತ್ರಿಕ ಪ್ರಯೋಗವಾಗಬಾರದು: ಡಾ. ಎಂ. ಮೋಹನ್ ಆಳ್ವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಸಂಶೋಧನೆಗಳು ಕುತೂಹಲಗಳನ್ನು ತಣಿಸುತ್ತದೆ, ಶಿಕ್ಷಣ ಸಂಶೋಧನೆಗೆ ವೈಜ್ಞಾನಿಕ ಚೌಕಟ್ಟು ಒದಗಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಳ್ವಾಸ್ ಟ್ರೆಡಿ?ನಲ್ ಮೆಡಿಸಿನ್ ಆರ್ಕೈವ್ (ಎಟಿಎಂಎ) ಅಂಡ್ ರಿಸರ್ಚ್ ಸೆಂಟರ್ ಹಾಗೂ ಬೆಂಗಳೂರಿನ ಹಿಮಾಲಯ ವೆಲ್ ನೆಸ್ ಕಂಪೆನಿ ಸಹಯೋಗದಲ್ಲಿ ನಡೆದ ‘ಸಂವೇದ – ೨೦೨೨’ ಸಂಶೋಧನಾ ಕ್ರಮದ ಕುರಿತ ರಾ? ಮಟ್ಟದ ಸೆಮಿನಾರ್ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಹುಟ್ಟಿಕೊಳ್ಳುವುದು ಮಿಥ್ಯದಿಂದ ಆದರೆ ಉಳಿಯುವುದು ಸತ್ಯದಿಂದ. ಸಂಶೋಧನೆಯ ಮೂಲಕ ಸತ್ಯದ ಅನ್ವೇ?ಣೆ ಸಾಧ್ಯ. ವಿದ್ಯಾರ್ಥಿಗಳು ಪೂರ್ಣಾವಧಿ ಸಂಶೋಧನೆ ಕೈಗೊಳ್ಳುವುದರಿಂದ ದೇಶ ಆತ್ಮ ನಿರ್ಭರದೆಡೆಗೆ ಸಾಗುತ್ತದೆ ಎಂದು ಹೇಳಿದರು.

ಆಯುರ್ವೇದಕ್ಕೆ ಸಂಶೋಧನೆಯ ಅಗತ್ಯವಿಲ್ಲ ಆದರೆ ಚಿಕಿತ್ಸಾ ಕೌಶಲ್ಯ, ಔ?ಧೀಯ ಗುಣಧರ್ಮಗಳನ್ನು ತಿಳಿದುಕೊಳ್ಳಲು ಸಂಶೋಧನೆ ಅಗತ್ಯ. ಒಂದು ದೇಶದ ಅಭಿವೃದ್ಧಿಯನ್ನು ಅಳೆಯಲು ಅಲ್ಲಿನ ಸಂಶೋಧನಾ ಗುಣಮಟ್ಟ ಹಾಗೂ ಶಕ್ತಿಯನ್ನು ಅರಿತುಕೊಳ್ಳುವುದು ಉತ್ತಮ, ಸಂಶೋಧನೆ ಕೇವಲ ತಾಂತ್ರಿಕ ಪ್ರಯೋಗವಾಗದೇ ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ನಿಸ್ವಾರ್ಥ ಸಮಾಜಮುಖಿ ಚಿಂತನೆಗಳನ್ನು ಬೆಳೆಸಬೇಕು ಎಂದರು.

ಹಿಮಾಲಯ ವೆಲ್‌ನೆಸ್ ಕಂಪೆನಿಯ ರಿಸರ್ಚ್ ಆಂಡ್ ಡೆವೆಲೆಪ್‌ಮೆಂಟ್ ವಿಭಾಗದ ಹಿರಿಯ ಸಂಶೋಧನಾ ವಿಜ್ಞಾನಿ ಡಾ. ಅಶೋಕ್ ಬಿ ಕೆ, ಶಿರಸಿಯ ಚೈತನ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಹೆಗ್ಡೆಕಟ್ಟೆ , ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿವಿಯ ಸಹಪ್ರಾಧ್ಯಾಪಕ ಶಿವಲಿಂಗಸರ್ಜ್ ದೇಸಾಯಿ, ಹಿಮಾಲಯ ವೆಲ್‌ನೆಸ್ ಕಂಪೆನಿಯ ರಿಸರ್ಚ್ ಆಂಡ್ ಡೆವೆಲೆಪ್‌ಮೆಂಟ್ ವಿಭಾಗದ ಸಹ ಸಂಶೋಧನಾ ವಿಜ್ಞಾನಿ ಡಾ. ಸ್ವಾತಿ ಬಿ, ಜೈವಿಕ ಸಂಖ್ಯಾಶಾಸ್ತ್ರಜ್ಞ ಅಬ್ದುಲ್ ರೆಹ್‌ಮಾನ್ ಅಬ್ದುಲ್ ಅಝೀಝ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಲಿಟರರಿ ರಿಸರ್ಚ್, ಇಫೆಕ್ಟಿಬ್ ಸೈಕೊ-ಎಕ್ಸ್ಟಾಕ್ಷನ್, ಕ್ಲಿನಿಕಲ್ ರಿಸರ್ಚ್ ಹಾಗೂ ಬಯೋಸ್ಟಾಟಿಸ್ಟಿಕ್ಸ್ ಕುರಿತು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಕಾಲೇಜುಗಳ ೩೦೦ಕ್ಕೂ ಅಧಿಕ ಮೆಡಿಕಲ್ ವಿದ್ಯಾರ್ಥಿಗಳು ಭಾಗವಹಿಸಿದರು. ಯುಜಿ, ಪಿಜಿ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

ಆಳ್ವಾಸ್ ಟ್ರೆಡಿ?ನಲ್ ಮೆಡಿಸಿನ್ ಆರ್ಕೈವ್ (ಎಟಿಎಂಎ) ಅಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿ, ಕಾಲೇಜಿನ ಪಿಜಿ ಡೀನ್ ಡಾ. ರವಿಪ್ರಸಾದ್ ಹೆಗ್ಡೆ ವಂದಿಸಿದರು. ಸಹಪ್ರಾಧ್ಯಾಪಕಿ ಡಾ. ಗೀತಾ ಬಿ. ಮಾರ್ಕಂಡೆ ಕಾರ್ಯಕ್ರಮ ನಿರೂಪಿಸಿದರು.

Exit mobile version