Site icon Kundapra.com ಕುಂದಾಪ್ರ ಡಾಟ್ ಕಾಂ

ಕೆಸಿಇಟಿ ಫಲಿತಾಂಶ: ಆಳ್ವಾಸ್ ವಿದ್ಯರ್ಥಿಗಳ ಮಹತ್ತರ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಕಳೆದ ಜೂನ್ ತಿಂಗಳಿನಲ್ಲಿ ನಡೆದ ಕರ್ನಾಟಕ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ರಾಜ್ಯದ ಟಾಪ್ 9 ರ್ಯಾಂಕ್ ಗಳಲ್ಲಿ 2ನೇ ರ್ಯಾಂಕನ್ನು ಇಲ್ಲಿನ ವಿದ್ಯಾರ್ಥಿ ಮನೋಜ್ ಪಡೆದಿದ್ದು, ಬಿಎಸ್ಸಿ ಅಗ್ರಿಯಲ್ಲಿ 5ನೇ ರ್ಯಾಂಕ್, ಬಿಎನ್ವೈಎಸ್ಲ್ಲಿ 8ನೇ ರ್ಯಾಂಕ್, ಪಶು ವೈದ್ಯಕೀಯದಲ್ಲಿ 12ನೇ ರ್ಯಾಂಕ್, ಬಿ.ಫಾರ್ಮ್ ಹಾಗೂ ಡಿ.ಫಾರ್ಮಾದಲ್ಲಿ 22ನೇ ರ್ಯಾಂಕ್, ಇಂಜಿನಿಯರಿಂಗ್ನಲ್ಲಿ 77ನೇ ರ್ಯಾಂಕ್ ಗಳಿಸಿದ್ದಾರೆ.

ಮೊದಲ 50 ರ್ಯಾಂಕ್ 11 ರ್ಯಾಂಕ್, ಮೊದಲ 100 ರಲ್ಲಿ 17 ರ್ಯಾಂಕ್ ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 1966 ವಿದ್ಯರ್ಥಿಗಳಲ್ಲಿ 55 ವಿದ್ಯಾರ್ಥಿಗಳ 180ರಲ್ಲಿ 150ಕ್ಕಿಂತ ಅಧಿಕ ಅಂಕಗಳನ್ನು ಪಿಸಿಬಿ ಹಾಗೂ ಪಿಸಿಎಂ ವಿಷಯಗಳಲ್ಲಿ ಪಡೆದಿದ್ದಾರೆ.

1228 ವಿದ್ಯಾರ್ಥಿಗಳು 180ರಲ್ಲಿ 100ಕ್ಕೂ ಅಧಿಕ ಅಂಕ ಪಿಸಿಬಿ ವಿಷಯದಲ್ಲಿ ಹಾಗೂ 571 ವಿದ್ಯಾರ್ಥಿ ಪಿಸಿಎಂ ವಿಷಯದಲ್ಲಿ ಪಡೆದಿದ್ದಾರೆ.

1248 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯ ಯಾವುದಾದರೂ ಒಂದು ವಿಷಯದಲ್ಲಿ 50 ರಿಂದ 60ರ ನಡುವೆ ಅಂಕಗಳನ್ನು ಪಡೆದಿದ್ದಾರೆ. 1000 ರ್ಯಾಂಕ್ ಒಳಗೆ 476 ರ್ಯಾಂಕ್ ಲಭಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್, ಆಡಳಿತಾಧಿಕಾರಿ ಪ್ರದೀಪ್ ಜೈನ್ ಉಪಸ್ಥಿತರಿದ್ದರು.

Exit mobile version