Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಕಾರಂತ ಥೀಂ ಪಾರ್ಕಗೆ ಕಡೂರು ಶಾಸಕ ವೈ.ಎಸ್.ವಿ.ದತ್ತ ಭೇಟಿ

ಕೋಟ: ಇಲ್ಲಿನ ಡಾ. ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸಂಭ್ರಮದಲ್ಲಿರುವ ಕೋಟ ಕಾರಂತ ಥೀಂ ಪಾರ್ಕಗೆ ಕಡೂರು ಶಾಸಕ, ಜೆಡಿಎಸ್ ಧುರೀಣ ವೈ.ಎಸ್.ವಿ.ದತ್ತ ಭೇಟಿ ನೀಡಿದರು.. ಕಾರಂತರ ಹುಟ್ಟೂರಿನಲ್ಲಿ ನಿರ್ಮಾಣವಾಗಿ ಸಾಂಸ್ಕೃತಿಕ ಸಾಹಿತ್ಯಿಕ ಸಿಂಚನವನ್ನು ನೀಡುತ್ತಿರುವ ಥೀಂ ಪಾರ್ಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಶ್ರೀಯುತರನ್ನು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಥೀಂ ಪಾರ್ಕಗೆ ಬರಮಾಡಿಕೊಂಡ ಶಾಲು ಹೊದಿಸಿ ಸನ್ಮಾನಸಿ ಗೌರವಿಸಿದರು. ಈ ಸಂದರ್ಭ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಸದಸ್ಯರಾದ ಜಯಪ್ರಕಾಶ್, ಪ್ರತಿಷ್ಠಾನದ ಸುಬ್ರಾಯ ಆಚಾರ್ಯ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಪ್ರತಿಷ್ಢಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ, ಕೋಟ ಪಂಚಾಯಿತಿ ಸದಸ್ಯ ಸಂತೋಷ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Exit mobile version