Kundapra.com ಕುಂದಾಪ್ರ ಡಾಟ್ ಕಾಂ

ನವೀಕೃತ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಸ್ಥಳೀಯ ಸಂಸ್ಥೆಗಳು ಜನಸಾಮಾನ್ಯರಿಗೆ ಹೆಚ್ಚಿನ ಮೂಲ ಅವಶ್ಯಕತೆಯನ್ನು ಒದಗಿಸಲು ಸಾಧ್ಯವಾಗುತ್ತದೆ. ದೀರ್ಘ ಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲು ಮುಕ್ತಿಧಾಮ ಟ್ರಸ್ಟ್ ರಿ. ಪಟ್ಟಣ ಪಂಚಾಯತ್ ಜತೆ ಕೈ ಜೋಡಿಸಿ ಶ್ರಮಿಸಿದ ಕಾರ್ಯ ಶ್ಲಾಘನೀಯ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ ಕುಮಾರ್ ಹೇಳಿದರು.

ಅವರು ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಪಟ್ಟಣ ಪಂಚಾಯತ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದ ತಲಾ ಒಂದೊಂದು ಸಿಲಿಕಾನ್ ಚೇಂಬರ್ ಅಳವಡಿಸಿ ನವೀಕರಿಸಿದ ರುದ್ರಭೂಮಿಯ ಲೋಕಾರ್ಪಣೆ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಮುಕ್ತಿಧಾಮ ಟ್ರಸ್ಟಿಗೆ ಕೀ ಹಸ್ತಾಂತರಣ ಸಮಾರಂಭದಲ್ಲಿ ಮಾತನಾಡಿದರು.

ಬೈಂದೂರು ಬಾಜಪ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ರುದ್ರಭೂಮಿ ಜನರ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಒದಗಿಸಲಾಗುವುದು. ಈಗಾಗಲೇ ಬೈಂದೂರಿನಲ್ಲಿ ಬಸ್ ತಂಗುದಾಣ, ಇ ಶೌಚಾಲಯಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುಕ್ತಿಧಾಮ ಟ್ರಸ್ಟಿನ ಅಧ್ಯಕ್ಷ ಬಿ. ಚಂದ್ರಶೇಖರ ನಾವಡ ಮಾತನಾಡಿ ದೇವಾಲಯಗಳಿಗಿರುವಷ್ಟೇ ಮಹತ್ವ ರುದ್ರಭೂಮಿಗೂ ಇದೆ. ಬಡವ ಶ್ರೀಮಂತ ಎನ್ನದೇ ಎಲ್ಲರಿಗೂ ಗೌರವಯುತ ಅಂತಿಮ ವಿದಾಯ ದೊರೆಯಬೇಕೆನ್ನುವುದು ಟ್ರಸ್ಟಿನ ಮುಖ್ಯ ಉದ್ದೇಶ್ಯ. ರುದ್ರಭೂಮಿಯ ಸ್ವಚ್ಚತೆ, ಅಭಿವೃದ್ಧಿ ಒಂದು ಪವಿತ್ರಕಾರ್ಯ ಎಂದು ಪರಿಗಣಿಸಿ ಸಾರ್ವಜನಿಕರು ಟ್ರಸ್ಟಿನ ಕಾರ್ಯಕ್ಕೆ ನೆರವು ನೀಡಬೇಕು ಎಂದರು.

ಟ್ರಸ್ಟಿನ ಗೌರವಾಧ್ಯಕ್ಷ ಕೆ. ವೆಂಕಟೇಶ ಕಿಣಿ, ಧ.ಗ್ರಾ ಅಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ವಿನಾಯಕ ಪೈ, ರಾಮಚಂದ್ರ, ರೋಟರಿ ಅಧ್ಯಕ್ಷ ಉದಯ ಆಚಾರ್, ಜೇಸಿ ಅಧ್ಯಕ್ಷೆ ಸವಿತಾ ಗಾಣಿಗ, ಬಾಲಚಂದ್ರ ಮುಳೆ, ಐ ನಾರಾಯಣ, ಡಾ. ಪ್ರವೀಣ ಶೆಟ್ಟಿ ಟ್ರಸ್ಟಿನ ಉಪಾಧ್ಯಕ್ಷ ಮಂಜುನಾಥ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಡಾ. ರಘು ನಾಯ್ಕ ಸ್ವಾಗತಿಸಿ ವಂದಿಸಿದರು

Exit mobile version