Kundapra.com ಕುಂದಾಪ್ರ ಡಾಟ್ ಕಾಂ

ಕಾರಂತರು ಕೋಟದ ಹೆಮ್ಮೆಯ ಆಸ್ತಿ: ಕೃಷ್ಣ ಮೂರ್ತಿ ಉರಾಳ

ಕೋಟ: ಕಾರಂತರು ಅಂದು ನಡೆದಾಡಿದ ಜಾಗದಲ್ಲಿ ತಲೆ ಎತ್ತಿರುವ ಕಾರಂತ ಕಲಾ ಭವನದಲ್ಲಿ ವರ್ಷ ವರ್ಷವು ಕೂಡ ಕಾರಂತರ ಜನ್ಮ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸುತ್ತಿರುವ ಸಂತಸದ ವಿಚಾರವಾಗಿದೆ. ಕೋಟ ಕಾರಂತ ಕಲಾ ಭವನ ನಮ್ಮ ಕೋಟದ ಹೆಮ್ಮೆಯ ಆಸ್ತಿ ಎಂದು ಕೋಟ ಯಕ್ಷಾಂತರಂಗದ ವ್ಯವಸ್ಥಾಪಕ ಕೃಷ್ಣ ಮೂರ್ತಿ ಉರಾಳ ಅಭಿಪ್ರಾಯಪಟ್ಟರು.

ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಡಾ.ಕಾರಂತರ ಅಬಿಮಾನಿಗಳ ಬಳಗ ಪಾರಂಪಳ್ಳಿ, ಇನಿದನಿ ಕೋಟ, ಗೆಳೆಯರ ಬಳಗ ಕಾರ್ಕಡ ಜಬ್ಬರ್ ಸುಮೋ ಸಾರಥ್ಯದಲ್ಲಿ ಪ್ರಸ್ತುತ ಪಡಿಸಿದ ಸುಧನ್ವ ಕಾಳಗ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಟತಟ್ಟು ಪಂಚಾಯಿತಿ ಸದಸ್ಯ ವಾಸು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆವಹಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಂಸ್ಕೃತಿಕ ಚಿಂಕರ ಶಿವಾನಂದ ಹಂದೆ, ಇನಿದನಿ ವ್ಯವಸ್ಥಾಪಕ ರವಿಕಾರಂತ ಮತ್ತು ಗೆಳೆಯರ ಬಳಗ ಕಾರ್ಕಡ ಕಾರ್ಯದರ್ಶಿ ಕೆ. ಶಿವರಾಮ ಉಪಸ್ಥಿತರಿದ್ದರು. ಇದೇ ಸಂದರ್ಭ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರತಿಷ್ಠಾನದ ಕಾರ್ಯದರ್ಶಿ ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಧನ್ವ ಕಾಳಗ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು.

Exit mobile version