Kundapra.com ಕುಂದಾಪ್ರ ಡಾಟ್ ಕಾಂ

ಅ.8: ಉಪ್ಪಿನಕುದ್ರು ಗೊಂಬೆಯಾಟ ತಂಡ ಹಾಂಗ್‌ಕಾಂಗ್‌ಗೆ

ಕುಂದಾಪುರ: ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡ ತನ್ನದೇ ಆದ ಕಾಯಕದಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವುದಂತೂ ಸುಳ್ಳಲ್ಲಾ. ಇಲ್ಲಿಯ ಕಲಾ ಪರಂಪರೆ ೩೫೦ ವರ್ಷಗಳ ಸುಧೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ಇಂದು 6 ನೇ ತಲಾಂತರದಲ್ಲಿ ನಿರಂತರವಾಗಿ ಪ್ರವಹಿಸುತ್ತಿರುವುದು ಒಂದು ಗಿನ್ನಿಸ್ ದಾಖಲೆವೆನ್ನಬಹುದು. ಈ ಎಲ್ಲಾ ಸಾಧನೆ ಸಂವರ್ಧನೆಗೆ ಮೂಲ ಕಾರಣ ಉಪ್ಪಿನಕುದುರಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ. ಸರಕಾರದ ಯಾವುದೇ ಸಹಾಯಧನ ನಿರೀಕ್ಷಿಸದೆ, ಸಾಂಘಿಕ ಪ್ರಯತ್ನದಿಂದ ಅಳಿವಿನಂಚಿನಲ್ಲಿರುವ ವಿಶಿಷ್ಟ ಅಷ್ಟೇ ಅಪರೂಪದ ಗೊಂಬೆಯಾಟ ಕಲೆಯನ್ನು ಪ್ರಪಂಚದಾದ್ಯಂತ15-20 ಕ್ಕೂ ಹೆಚ್ಚು ಬಾರಿ ನಾನಾ ರಾಷ್ಟ್ರಗಳಿಗೆ ಪರಿಚಯಿಸಿದ ಕೀರ್ತಿ ಈ ತಂಡದ್ದು.

ಇಂದು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ತನ್ನ ಸಾಧನೆಯ ಇನ್ನೊಂದು ಮೈಲಿಗಲ್ಲಿಗಾಗಿ ಸಿದ್ಧವಾಗುತ್ತಿರುವುದೊಂದು ವಿಶೇಷ. ರಾಜ್ಯ ಪ್ರಶಸ್ತಿ ವಿಜೇತ ಭಾಸ್ಕರ್ ಕೊಗ್ಗ ಕಾಮತರ ನೇತೃತ್ವದಲ್ಲಿ ಸಅಕ್ಟೋಬರ್ ೮ರಂದು ಹಾಂಗ್ ಕಾಂಗ್ ದೇಶದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದೆ. ಒಂದು ವಾರದ ಕಾಲ ಅಲ್ಲಿ ಪ್ರದರ್ಶನ ನೀಡಲಿರುವ ಈ ತಂಡವನ್ನು ಹಾಂಗ್ ಕಾಂಗ್ ಕನ್ನಡ ಸಂಘ ಆಮಂತ್ರಿಸಿ ಆದರಾತಿಥ್ಯ ನೀಡುತ್ತಿದೆ. ಹಾಗೇ ನಾಡಿನ ಮುಂಚೂಣಿ ಐ.ಟಿ. ದಿಗ್ಗಜ ಇನ್ಫೋಸಿಸ್ ನ ಡಾ. ಸುಧಾಮೂರ್ತಿಯವರು ಈ ಪ್ರವಾಸದ ಸಹಪ್ರಾಯೋಜಕತ್ವ ವಹಿಸಿರುವುದೊಂದು ವಿಶೇಷ.

Exit mobile version