ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲತಾ ಪೂಜಾರಿ ಅವರಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿ ದೊರೆತಿದೆ.
ಲತಾ ಪೂಜಾರಿ ಅವರು ಮಂಡಿಸಿದ “ಅನಾಲಿಸಿಸ್ ಆಫ್ ಕ್ರೆಡಿಟ್ ಆಪರೇಷನ್ ಇನ್ ಕಮರ್ಷಿಯಲ್ ಬ್ಯಾಂಕ್” ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದ್ದು, ಡಾ. ಎ. ಎಸ್. ಶಿರಾಳ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಯಲ್ಲಾಪುರ ಹಾಗೂ ಧಾರವಾಡದಲ್ಲಿ ಶಿಕ್ಷಣವನ್ನು ಪೂರೈಸಿ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಐದು ವರ್ಷಗಳಿಂದ ವಾಣಿಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಲತಾ ಪೂಜಾರಿ ಅವರು, ಶಿರೂರು ಮೂಲದ ನಾರಾಯಣ ಮಾಚ ಪೂಜಾರಿ ಹಾಗೂ ಕಮಲ ಪೂಜಾರಿ ಅವರ ಪುತ್ರಿಯಾಗಿದ್ದಾರೆ.