ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. ಬೈಂದೂರು ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಶುಕ್ರವಾರ ಸಹಕಾರಿಯ ಕಛೇರಿ ಆವರಣದಲ್ಲಿ ನಡೆಯಿತು.
ಸಹಕಾರಿ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದೆ. ಆರ್ಥಿಕ ವರ್ಷದಲ್ಲಿ ರೂ. 5.34 ಕೋಟಿ ಠೇವಣಿ ಸಂಗ್ರಹಿಸಿ, ರೂ. 3.23 ಕೋಟಿ ಸಾಲ ನೀಡಿದೆ. ರೂ. 5.54 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿದ್ದು, ರೂ. 47 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದೆ. ಈ ವರ್ಷದಲ್ಲಿ ರೂ. 9.20 ಲಕ್ಷ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಶೇ. 10% ಡಿವಿಡೆಂಡ್ ಘೋಷಿಸಲಾಗಿದೆ. ಉತ್ತಮ ಸೇವೆ ನೀಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿರುವುದು ಸದಸ್ಯರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಎಂದರು.
ಉಪಾಧ್ಯಕ್ಷ ಗೋಪಾಲಕೃಷ್ಣ ಕೆ, ನಿರ್ದೇಶಕರಾದ ಭೀಮೇಶ ಕುಮಾರ್ ಎಸ್. ಜಿ, ಪ್ರಸಾದ ಪ್ರಭು, ಯು. ಪ್ರಕಾಶ ಭಟ್ ಉಪ್ಪುಂದ, ರಾಜೇಶ ಪೈ, ಬಾಲಕೃಷ್ಣ ಪ್ರಭು, ಗೌರಿ ಮಂಗೇಶ್, ಮೋಹಿನಿ ಜಿ. ಶೆಟ್ಟಿ, ಗಣೇಶ ಗಾಣಿಗ ಹಾಜರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಎಂ. ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ಅರುಣಕುಮಾರ್ ಶಿರೂರು ವಂದಿಸಿದರು.