Kundapra.com ಕುಂದಾಪ್ರ ಡಾಟ್ ಕಾಂ

ತಗ್ಗರ್ಸೆ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೂಲ್ಯಣ್ಣ ಗಾಣಿಗ, ಕಾರ್ಯದರ್ಶಿಯಾಗಿ ಸುಧಾಕರ ಮೊಗವೀರ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಗ್ಗರ್ಸೆ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ 33ನೇ ವರ್ಷದ ಅಧ್ಯಕ್ಷರಾಗಿ ಸೂಲ್ಯಣ್ಣ ಗಾಣಿಗ ಹಾಗೂ ಕಾರ್ಯದರ್ಶಿಯಾಗಿ ಸುಧಾಕರ ಮೊಗವೀರ ಆಯ್ಕೆಯಾಗಿದ್ದಾರೆ.

ಸಮಿತಿಯ ಗೌರವಾಧ್ಯಕ್ಷರಾಗಿ ಟಿ. ನಾರಾಯಣ ಹೆಗ್ಡೆ, ಉಪಾಧ್ಯಕ್ಷರಾಗಿ ಗುರುದತ್ತ ಎಮ್. ಎಚ್., ವೆಂಕಟರಮಣ ದೇವಾಡಿಗ, ನಾಗರಾಜ ಎಚ್, ದಿವಾಕರ ಶೆಟ್ಟಿ , ಕೆ.ವಿ ಸತೀಶ್, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಪೂಜಾರಿ, ವಸಂತ ಬಿ, ರಾಘವೇಂದ್ರ ಗಾಣಿಗ, ಕೃಷ್ಣ ಗಾಣಿಗ, ಮಂಜುನಾಥ ದೇವಾಡಿಗ, ಗಣೇಶ ಗಾಣಿಗ, ರಾಜು ಹುಳುವಾಡಿ, ನಾಗರಾಜ ಶೆಟ್ಟಿ, ಸಂತೋಷ ಬಿಲ್ಲವ ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿ ಸುಭಾಷ್ ಪೂಜಾರಿ, ಸುಧಾಕರ ಶೆಟ್ಟಿ, ನೆಲ್ಯಾಡಿ ಪ್ರಭಾಕರ ಮೊಗವೀರ, ನಾಗರಾಜ ದೇವಾಡಿಗ, ಸುಧೀರ ಶೆಟ್ಟಿ, ಮಹೇಶ ಗಾಣಿಗ, ರಾಘವೇಂದ್ರ ಮೋಗವೀರ, ಗಣೇಶ ದೇವಾಡಿಗ, ನೀಲಕಂಠ ಹುದಾರ್, ಚಂದ್ರ ಪೂಜಾರಿ, ಅಕ್ಷಯ ಶೆಟ್ಟಿ, ಜಯರಾಜ ಹುದಾರ್, ಸಾಂಸ್ಕೃತಿಕ ಕಾರ್ಯದರ್ಶಿ ತಿಮ್ಮಪ್ಪ ಗಾಣಿಗ, ಚಂದ್ರ ಶೆಟ್ಟಿ, ನಾಗಪ್ಪ ಬಿಲ್ಲವ, ಆನಂದ ಟೈಲರ್, ಮಾಧವ ಬಿಲ್ಲವ, ಸುಬ್ರಹ್ಮಣ್ಯ ಮೊಗವೀರ, ಕ್ರೀಡಾ ಕಾರ್ಯದರ್ಶಿ ರವೀಂದ್ರ ಗಾಣಿಗ, ರೋಶನ್ ಹುದಾರ್, ವೆಂಕಟರಮಣ ದೇವಾಡಿಗ, ಅರ್ಜುನ್ ಶೆಟ್ಟಿ, ಶಿವ ಗಾಣಿಗ, ನಾಗೇಶ ಎಚ್, ಸುಬ್ರಹ್ಮಣ್ಯ ಆಚಾರಿ, ಸುಶಾಂತ್ ಶೆಟ್ಟಿ, ಪ್ರಮೋದ್ ಪೂಜಾರಿ, ಸಂದೀಪ್ ಪೂಜಾರಿ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರು ದೀಪಕ್ ಕುಮಾರ್ ಶೆಟ್ಟಿ, ಶಂಕರ ಪೂಜಾರಿ, ರಾಜೀವ ಹುದಾರ್, ಗಣೇಶ್ ಟೈಲರ್, ಪ್ರಭಾಕರ್ ಗಾಣಿಗ, ಗೋವಿಂದ ಗಾಣಿಗ, ಉದಯ ಕುಮಾರ್ ಶೆಟ್ಟಿ, ನಾರಾಯಣ ಪೂಜಾರಿ ಕರುಣಾಕರ ಶೆಟ್ಟಿ, ನೆಲ್ಯಾಡಿ ಪ್ರದೀಪ್ ಕುಮಾರ್ ಶೆಟ್ಟಿ, ಮಂಜು ದೇವಾಡಿಗ, ಪ್ರಭಾಕರ ಶೆಟ್ಟಿ, ಭಾಸ್ಕರ ಶೆಟ್ಟಿ, ವೆಂಕಟರಮಣ ಗಾಣಿಗ, ಮುತ್ತಯ್ಯ ಬಿಲ್ಲವ, ವೆಂಕಟರಮಣ ದಾಸ್. ಕೋಶಾಧಿಕಾರಿ ಗಣೇಶ್ ಬಿಲ್ಲವ, ಗೌರವ ಲೆಕ್ಕ ಪರಿಶೋಧಕರು ಬಾಬು ಹೆಗ್ಡೆ ಆಯ್ಕೆಯಾಗಿದ್ದಾರೆ.

ಗಣೇಶೋತ್ಸವದ ಕಾರ್ಯಕ್ರಮಗಳು:
ಅ. 31ರ ಬುಧವಾರ ಬೆಳಿಗ್ಗೆ ಗಣಪತಿ ವಿಗ್ರಹ ಸ್ಥಾಪನೆ, ಸಂಜೆ 6-00 ರಿಂದ ಲಕ್ಷ್ಮಿ ವೆಂಕಟರಮಣ ಮಹಿಳಾ ಭಜನಾ ಮಂಡಳಿ ತಗ್ಗರ್ಸೆ ಇವರಿಂದ “ಭಜನಾ ಕಾರ್ಯಕ್ರಮ”, ಸಂಜೆ 6-30 ರಿಂದ ಅಂಗನವಾಡಿ ಕೇಂದ್ರ ತಗ್ಗರ್ಸೆ ಮಕ್ಕಳಿಂದ “ನೃತ್ಯ ಕಾರ್ಯಕ್ರಮ”, ಸಂಜೆ 7 ಕ್ಕೆ ಸ್ಥಳೀಯರಿಂದ ನೃತ್ಯ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳು ಹಾಗೂ “ರಾತ್ರಿ ಪೂಜೆ”. ರಾತ್ರಿ 9.00ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ನೃತ್ಯ ತಂಡ ಇಂಡಿಯನ್ ಡಾನ್ಸ್ ಗ್ರೂಪ್ ಅರೆಹಾಡಿ ಶಾಲೆಬಾಗಿಲು ಉಪ್ಪುಂದ ಇವರಿಂದ “ ನೃತ್ಯ ಮತ್ತು ಸಂಗೀತ ಸಂಜೆ” ನಡೆಯಲಿದೆ.

ಸೆ.1ರ ಗುರುವಾರ ಸಂಜೆ ಗಂಟೆ 5.30 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ ಇಲ್ಲಿನ ಮಕ್ಕಳಿಂದ “ಮನೋರಂಜನಾ ಕಾರ್ಯಕ್ರಮಗಳು”, ಸಂಜೆ 7.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ. ರಾತ್ರಿ 8-30ಕ್ಕೆ “ಕುಣಿತ ಭಜನಾ ಸ್ಪರ್ಧೆ”, ಛದ್ಮವೇಷ ಸ್ಪರ್ಧೆ, ಸೆ.2ರ ಶುಕ್ರವಾರದಂದು ಮಹಾ ಅನ್ನಸಂತರ್ಪಣೆ ಸಂಜೆ ಆಕರ್ಷಕ ಪುರಮೆರವಣಿಗೆಯೊಂದಿಗೆ ವಿಗ್ರಹ ವಿಸರ್ಜನೆ ನಡೆಯಲಿದೆ.

Exit mobile version