Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪ್ಲೈಓವರ್ ತಡೆಗೋಡೆಯಲ್ಲಿ ವಿದ್ಯುತ್ ಪ್ರವಹಿಸಿದ ವೀಡಿಯೋ ವೈರಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಆ.24:
ಕುಂದಾಪುರದ ಫೈಓವರ್ ತಡೆಗೋಡೆಯಲ್ಲಿ ವಿದ್ಯುತ್ ಸಂಚಾರವಾಗುತ್ತಿರುವ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆತಂಕಕ್ಕೆ ಕಾರಣವಾಗಿತ್ತು. ದಾರಿದೀಪಕ್ಕಾಗಿ ವಿದ್ಯುತ್ ಸಂಪರ್ಪ ಕಲ್ಪಿಸುವ ವೇಳೆ ಮಾಡಲಾಗಿರುವ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಮೆಸ್ಕಾಂ ಅಧಿಕಾರಿಗಳು, ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗಿದೆ. ಮುಂಜಾಗೃತಾ ಕ್ರಮವಾಗಿ ತಕ್ಷಣ ಹೆದ್ದಾರಿ ದಾರಿದೀಪದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದಿದ್ದಾರೆ.

ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಘಟನೆಯ ಬಗ್ಗೆ ಪ್ರತಿಕ್ರಿಯಿಸಿ ಹೆದ್ದಾರಿ ದಾರಿದೀಪದ ನಿರ್ವಹಣೆ ನವಯುಗ ಕಂಪೆನಿ ಜವಾಬ್ದಾರಿಯಾಗಿದ್ದು ಅವರಿಗೆ ಸೂಚನೆ ನೀಡಲಾಗಿದೆ. ತಕ್ಷಣ ಸಮಸ್ಯೆ ಪರಿಹರಿಸುವ ಬಗ್ಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.

ಮಳೆಯ ಹಿನ್ನೆಲೆ ವಾಹನ ಸವಾರರು ಫೈಓವರ್ ಮೇಲೆ ನಿಂತಿದ್ದ ಸಂದರ್ಭ ಫೈಓವರ್ ತಡೆಗೋಡೆ ಭೀಮ್ ನಲ್ಲಿ ಒಂದು ಕಡೆ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದೆ ಎನ್ನಲಾಗಿದೆ. ಟೆಸ್ಟರ್ ಮೂಲಕ ಪರಿಶೀಲಿಸಿದಾಗ ಟೆಸ್ಟರ್ ನಲ್ಲಿ ಬೆಳಕು ಬಂದಿದ್ದು, ವಿದ್ಯುತ್ ಪ್ರವಹಿಸುತ್ತಿರುವುದು ಖಾತ್ರಿಯಾಗಿದೆ. ಕೆಲವು ತಿಂಗಳ ಹಿಂದಷ್ಟೇ ಪ್ಲೈಓವರ್ ದಾರಿದೀಪಕ್ಕಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.

Exit mobile version