ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಆ.24: ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಬೈಂದೂರು ತಾಲೂಕು ಕೇಂದ್ರ ಸಮಿತಿ ಮತ್ತು ಬೈಂದೂರು ತಾಲೂಕು ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷರಾದ ರಘುರಾಮ ಕೆ. ಪೂಜಾರಿ, ಭಜನಾ ಪರಿಷತ್ ಅಧ್ಯಕ್ಷರಾದ ಕೃಷ್ಣ ಪೂಜಾರಿ ಶಿರೂರು, ನಿಕಟಪೂರ್ವ ಕೇಂದ್ರ ಸಮಿತಿ ಅಧ್ಯಕ್ಷರಾದಕೃಷ್ಣ ಪೂಜಾರಿ, ವಂಡ್ಸೆ ವಲಯಅಧ್ಯಕ್ಷರಾದ ವೀಣಾ ಆಚಾರ್ಯ, ಕಿರಿಮಂಜೇಶ್ವರ ವಲಯಾಧ್ಯಕ್ಷರಾದ ದಿನೇಶ್ ಆಚಾರ್ಯ, ತ್ರಾಸಿ ವಲಯ ಅಧ್ಯಕ್ಷರಾದ ನಾಗರಾಜ ಖಾರ್ವಿ, ಕೊಲ್ಲೂರು ವಲಯಾಧ್ಯಕ್ಷರಾದ ಜಯರಾಮ್ ಪೂಜಾರಿ, ಗೋಳಿಹೊಳೆ ವಲಯಾಧ್ಯಕ್ಷರಾದ ಮಂಜುನಾಥ್ ಪೂಜಾರಿ, ಹಟ್ಟಿಯಂಗಡಿ ವಲಯಾಧ್ಯಕ್ಷರಾದ ನಿತ್ಯಾನಂದ ಆಚಾರ್ಯ, ಭಜನಾ ಪರಿಷತ್ ವಲಯ ಸಂಯೋಜಕರಾದ ಮಂಜುನಾಥ್ ಉಪ್ಪುಂದ, ಮಂಜುನಾಥ್ ಕಿರಿಮಂಜೇಶ್ವರ, ಕಿರಿಮಂಜೇಶ್ವರ ವಲಯದ ನಿಕಟಪೂರ್ವ ಅಧ್ಯಕ್ಷರಾದ ಸುಮಾ ಆಚಾರ್ಯ, ಬೈಂದೂರು ತಾಲ್ಲೂಕು ಯೋಜನಾಧಿಕಾರಿ ಕೆ. ವಿನಾಯಕ್ ಪೈ, ಬೈಂದೂರು ವಲಯ ಮೇಲ್ವಿಚಾರಕ ರಾಮಚಂದ್ರ, ಬೈಂದೂರು ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ಉಪಸ್ಥಿತರಿದ್ದರು.