ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತಲ್ಲೂರು ಹೊಯ್ಸಳ ಸ್ಟುಡಿಯೋ ಮಾಲಿಕ ಶ್ರೀಧರ ಉಪ್ಪಿನಕುದ್ರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಲ್ಲೂರಿನಲ್ಲಿ ಸ್ಟೂಡಿಯೋ ಹೊಂದಿದ್ದ ಅವರು ತನ್ನ ವೃತ್ತಿಯ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದರು. ಮೃತರು ಪತ್ನಿ, ಮಗು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.