Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ರೈಲು ಡಿಕ್ಕಿಯಾಗಿ ಪಿಯುಸಿ ವಿದ್ಯಾರ್ಥಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ರೈಲು ಡಿಕ್ಕಿಯಾಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನದ ವೇಳೆ ಶಿರೂರು ಗ್ರಾಮದ ನಿರೋಡಿ ಸಮೀಪ ನಡೆದಿದೆ. ಶಿರೂರು ಮುದ್ರುಮಕ್ಕಿ ನಿವಾಸಿ ನರಸಿಂಹ ಪೂಜಾರಿ ಎಂಬುವವರ ಪುತ್ರ ಸಂಪತ್ ಪೂಜಾರಿ (17) ಮೃತ ದುರ್ದೈವಿ.

ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ಸಂಪತ್, ಮಧ್ಯಾಹ್ನ ವೇಳೆ ನಿರೋಡಿಯ ತನ್ನ ಅಜ್ಜಿಯ ಮನೆಯಿಂದ ಮುದ್ರುಮಕ್ಕಿಯ ತಂದೆಯ ಮನೆಗೆ ಹೋಗುವ ಸಲುವಾಗಿ ರೈಲು ಹಳಿಯ ಮೇಲೆ ತೆರಳಿದ್ದಾನೆ. ಈ ವೇಳೆ ಹೆಡ್ ಪೋನ್ ಹಾಕಿಕೊಂಡಿದ್ದರಿಂದ ರೈಲು ಹಿಂದಿನಿಂದ ಬಂದಿರುವುದು ತಿಳಿಯದೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ನಾಳೆ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದುದರಿಂದ ಇಂದು ಕಾಲೇಜಿಗೆ ರಜೆ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version