Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಬೈಂದೂರು ಆಶ್ರಯದಲ್ಲಿ ‘ಸ್ವಾತಂತ್ರ್ಯ ಅಮೃತ ಮಹೋತ್ಸವ ವನ’ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ
.28: ರೋಟರಿ ಕ್ಲಬ್ ರಿ. ಬೈಂದೂರು ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಎನ್.ಇ.ಸಿ.ಎಫ್ ಬೈಂದೂರು ಸಹಯೋಗದಿಂದಿಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ‘ಸ್ವಾತಂತ್ರ್ಯ ಅಮೃತ ಮಹೋತ್ಸವ ವನ’ ಇತ್ತಿಚಿಗೆ ಉದ್ಘಾಟನೆಗೊಂಡಿತು.

ಉಡುಪಿ ಅರಣ್ಯ ಸಂಚಾರಿದಳದ ಎಸಿಎಫ್ ಶ್ರೀಧರ ಪಿ. ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವ ವನ ಉದ್ಘಾಟಿಸಿ ಮಾತನಾಡಿ, ಪ್ರಾಕೃತಿಕ ಅವಘಡಗಳು ಹೆಚ್ಚಲು ಅರಣ್ಯ ನಾಶ ಪ್ರಮುಖ ಕಾರಣವಾಗಿದೆ. ಮುಂದಿನ ಪೀಳಿಗೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕಿದ್ದರೆ, ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಪಾಲನೆ ಮಾಡುವ ಅಗತ್ಯವಿದೆ ಎಂದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಉದಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ರೋಟರ‍್ಯಾಕ್ಟ್ ಜಿಲ್ಲಾಧ್ಯಕ್ಷ ಜೈವಿಠ್ಠಲ್ ಕೆ.ಎಸ್., ಉಪಾಧ್ಯಕ್ಷ ಚಂದ್ರ ಪೂಜಾರಿ, ವಲಯ ಸೇನಾನಿ ಡಾ. ಪ್ರವೀಣ ಶೆಟ್ಟಿ, ರೋಟರ‍್ಯಾಕ್ಟ್ ಝೋನಲ್ ಕೋ-ಆರ್ಡಿನೇಟರ್ ಜಾನ್ಸ್‌ನ್ ಡಿ. ಅಲ್ಮೆಡಾ, ಬೈಂದೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಭಾನುಮತಿ ಬಿ.ಕೆ., ಬೈಂದೂರು ರೋಟರಿಯ ಐ. ನಾರಾಯಣ, ಎನ್‌ಇಸಿಎಫ್ ಬೈಂದೂರು ಅಧ್ಯಕ್ಷ ಪ್ರಸಾದ ಪಿ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಘು ನಾಯ್ಕ್ ಸ್ವಾಗತಿಸಿ, ಬೈಂದೂರು ರೋಟರಿ ಕಾರ್ಯದರ್ಶಿ ಸುಧಾಕರ ಪಿ. ವಂದಿಸಿದರು. ಬೈಂದೂರು ರೋಟರಿಯ ಗೋವಿಂದ ಎಂ. ಕಾರ್ಯಕ್ರಮ ನಿರೂಪಿಸಿದರು.

Exit mobile version