Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ರೋಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಭರತ್ ರಾಜ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಾಕ್ಟ್ ಕ್ಲಬ್ ಕೋಟೇಶ್ವರ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಕೋಟೇಶ್ವರ ರೋಟರಿ ಭವನದಲ್ಲಿ ಜರುಗಿತು. ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷರಾದ ಸುಧೀರ್ ಶೆಟ್ಟಿ ನೂಜಿ ಪದಪ್ರದಾನ ಮಾಡಿದರು.

ನೂತನ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ವಕ್ವಾಡಿ ಹಾಗೂ ಕಾರ್ಯದರ್ಶಿಯಾಗಿ ಭರತ್ ರಾಜ್ ಕೋಟೇಶ್ವರ ಆಯ್ಕೆಯಾದರು.

ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಪ್ರಭಾಕರ್ ಕುಂಭಾಶಿ ಹಾಗೂ ಆಲೂರು ಶಾಲಾ ಶಿಕ್ಷಕಿ ನಾಗರತ್ನ ಹೇರ್ಳೆ, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಮಹಾಲಾಸಾ ಕಿಣಿ, ರೋಟರಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ರೋಟರಾಕ್ಟ್ ಚೇರ್ಮನ್ ಅರುಣ್ ದೇವಾಡಿಗ, ರೋಟರಿ ಚಂದ್ರ ಪೂಜಾರಿ, ರೋಟರಿ ರವೀಂದ್ರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ನಿಶಾ ಜೋಗಿ ಕಾಳಾವರ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ್ ಆಚಾರ್ಯ ನಿರೂಪಿಸಿದರು.

Exit mobile version