Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಶಿಕ್ಷಕರ ದಿನಾಚರಣೆ – ಬಲಷ್ಠ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಆಶ್ರಯದಲ್ಲಿ ಶ್ರೀ ವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ಸೋಮವಾರ ಶಿಕ್ಷಕರ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್. ಪೂಜಾರಿ ಮಾತನಾಡಿ ಶಿಕ್ಷಕರು ಅಕ್ಷರ ಕಲಿಸುವುದಕ್ಕಷ್ಟೇ ಸೀಮಿತವಲ್ಲ. ಮಾರ್ಗದರ್ಶಕರಾಗಿ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳ ತಿದ್ದಿತೀಡಿ ಬಲಿಷ್ಠ ಸಾಮಾಜ ನಿರ್ಮಾಣದ ಬುನಾದಿ ಶಿಕ್ಷಕರಾಗಿದ್ದಾರೆ. ದೇಶ ಬೆಳಗುವ ಮಕ್ಕಳ ಭವಿಷ್ಯ ಬೆಳಗಿಸುವ ಮಹತ್ತರ ಕೆಲಸ ಶಿಕ್ಷರಿಂದ ಆಗುತ್ತದೆ ಎಂದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ನಿವೇದಿತಾ ಪ್ರೌಢಸಾಲೆ ನಿವೃತ್ತ ಮುಖ್ಯಶಿಕ್ಷಕ ದಿನಕರ ಆರ್.ಶೆಟ್ಟಿ ಉಪನ್ಯಾಸ ಮಾಡಿದರು.

ಕುಂದಾಪುರ ತಾಪಂ ಇಒ ಮಹೇಶ್ ಕುಮಾರ ಹೊಳ್ಳ, ಯುವ ಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಜಯಶೀಲ ಶೆಟ್ಟಿ, ಕುಂದಾಪುರ ಗಾಣಿಗ ಸೇವಾ ಸಂಘ ಅಧ್ಯಕ್ಷ ಪ್ರಭಾಕರ ಬಿ. ಕುಂಬಾಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಅಧ್ಯಕ್ಷ ಗಣೇಶ ಕುಮಾರ ಶೆಟ್ಟಿ, ತಾಲೂಕು ಅನುದಾನಿತ ಶಿಕ್ಷಕರ ಸಂಘ ಅಧ್ಯಕ್ಷ ನಾರಾಯಣ ಶೆಟ್ಟಿ, ಪ್ರೌಢ ಶಾಲಾ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ ಅಧ್ಯಕ್ಷೆ ಜ್ಯೋತಿ, ರಾಜ್ಯ ಪರಿಷತ್ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸದಸ್ಯ ಜಯಶೀಲ ಶೆಟ್ಟಿ, ಟೀಚರ್ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕ ಕಿಶನ್‌ರಾಜ್ ಶೆಟ್ಟಿ ಇದ್ದರು.

ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ೪೩ ಶಿಕ್ಷಕರ ಗೌರವಿಸಲಾಯಿತು. ಹೆಮ್ಮಾಡಿ ರಾಜು ಪೂಜಾರಿ ನಿರ್ದೇಶನದಲ್ಲಿ ಕುಂದಾಪುರ ವಲಯ ಶಿಕ್ಷಕರಿಂದ ಯಕ್ಷಸಿರಿ ಯಕ್ಷಗಾನ ನೃತ್ಯ ವೈಭವ ನಡೆಯಿತು.

ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ಶಶಿಧರ ಶೆಟ್ಟಿ ಮತ್ತು ಸಂತೋಷ ಶೆಟ್ಟಿ ನಿರೂಪಿಸಿದರು. ಕೋಡಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ರಾಜೇಶ್ ಪ್ರಾರ್ಥಿಸಿದರು.

Exit mobile version