Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮಹಾಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಮಾಜದ ಸಂಘಟನೆ ಮಾಡಲು ಸಹಕಾರಿ ಸಂಘದಂತಹ ಉತ್ತಮ ವೇದಿಕೆಯಿಂದ ಮಾತ್ರ ಸಾಧ್ಯ ಎಂದು ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ನಾಗಪ್ಪ ಕೊಠಾರಿ ಹೇಳಿದರು.

ಕುಂದಾಪುರ ರಾಜ್ಯ ಸರಕಾರಿ ನೌಕರರ ಕಟ್ಟಡದಲ್ಲಿನ ನೇತಾಜಿ ಸಭಾಭವನದಲ್ಲಿ ಭಾನುವಾರ ನಡೆದ ಕುಂದಾಪುರ ಭಂಡಾರ್ಕಾರ್ಸ್ ರಸ್ತೆಯಲ್ಲಿನ ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ 2021-22ನೇ ಸಾಲಿನ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನಂಜೆ ಸಹಕಾರಿ ಸಂಘದ ನಿವೃತ್ತ ಜನರಲ್ ಮ್ಯಾನೇಜರ್ ಶ್ರೀನಿವಾಸ, ಮಾನಂಜೆ ಸಹಕಾರಿ ಸಂಘದಲ್ಲಿ ಉನ್ನತ ಹುದ್ದೆಗೇರಿದ ಶಂಕರ್ ಕೊಠಾರಿ, ಫವರ್ ಲಿಪ್ಟರ್ ಸತೀಶ್ ಖಾರ್ವಿ, ಸಂಸ್ಥೆಯ ಉತ್ತಮ ಗ್ರಾಹಕರ ನೆಲೆಯಲ್ಲಿ ಲಕ್ಷಣ ಕೊಠಾರಿ, ಪತ್ರಕರ್ತ ಎಂ.ಎನ್ ಕೊಠಾರಿ, ಕೃಷಿಕರಾದ ಬಾಬು ಕೊಠಾರಿ ಅವರ ಸನ್ಮಾನಿಸಲಾಯಿತು.

ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಅನಾರೋಗ್ಯ ಸಮಸ್ಯೆಯಿರುವ ಬಡ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಲಾಯಿತು.

ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಶಂಕರ ಕೊಠಾರಿ ಯಡ್ತರೆ, ನಿರ್ದೇಶಕರಾದ ವೈ. ರಾಜು ಕೊಠಾರಿ, ಚಂದ್ರಶೇಖರ ಕೊಠಾರಿ, ನಾರಾಯಣ ಕೊಠಾರಿ, ಯು. ಶೀನಾ ಕೊಠಾರಿ, ಬಿ. ಸೀತಾರಾಮ ಕೊಠಾರಿ, ಬಾಬು ಕೊಠಾರಿ, ಬಾಬಿ ಕೊಠಾರಿ, ವೃತ್ತಿ ಪರಿಣಿತ ನಿರ್ದೇಶಕ ಶಂಕರ ಕೊಠಾರಿ ಕಂಚಾರು, ಹಿರಿಯರಾದ ಮಹಾಲಿಂಗ ಮಾಸ್ಟರ್, ಸಲಹಾ ಸಮಿತಿಯಲ್ಲಿರುವ ರವಿ ಗಾಣಿಗ ಇದ್ದರು.

ಅರ್ಚನ, ಸೌಭಾಗ್ಯ, ಚೈತನ್ಯ ಪ್ರಾರ್ಥಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಕೊಠಾರಿ ಮತ್ತು ನಾರಾಯಣ ಕೊಠಾರಿ ನಿರೂಪಿಸಿದರು. ಮಂಜು ಕೊಠಾರಿ ಸ್ವಾಗತಿಸಿ, ಗಿರೀಶ್ ಕೊಠಾರಿ ವಂದಿಸಿದರು.

Exit mobile version