Kundapra.com ಕುಂದಾಪ್ರ ಡಾಟ್ ಕಾಂ

ಜಡ್ಕಲ್‌ನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಕೊಲ್ಲೂರು: ಮನುಷ್ಯನು ಜೀವನದಲ್ಲಿ ಯಾರ ಬಗ್ಗೆಯೂ ಕೀಳು ಭಾವನೆ ಬೆಳೆಸಿಕೊಳ್ಳಬಾರದು. ಎಲ್ಲರೂ ತನ್ನಂತೆಯೇ ಎಂದು ನೋಡುತ್ತಾ, ಮನುಷ್ಯನನ್ನು ಮನುಷ್ಯನಂತೆಯೇ ನೋಡಬೇಕು. ಜೀವನದಲ್ಲಿ ಪರೋಪಕಾರಿ ಮನೋಭಾವನೆ ಬೆಳೆಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಜಡ್ಕಲ್ ಸೈಂಟ್ ಜಾರ್ಜ್ ಚರ್ಚಿನ ಧರ್ಮಗುರು ರೆ.ಫಾ. ಮ್ಯಾಥ್ಯೂ ಹೇಳಿದರು.

ಅವರು ಜಡ್ಕಲ್‌ನ ಸೈಂಟ್ ಜಾರ್ಜ್ ಚರ್ಚಿನ ಸಭಾಂಗಣದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಉಡುಪಿ, ಕೆಎಂಸಿ ಆಸ್ಪತ್ರೆ ಮಣಿಪಾಲ, ಕೆಎಸ್‌ಎಂಸಿಎ ಜಡ್ಕಲ್ ಮತ್ತು ಕೆಸಿವೈಎಂ ಜಡ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೆಎಸ್‌ಎಂಸಿಎ ಜಿಲ್ಲಾಧ್ಯಕ್ಷ ಪಿ.ಎಲ್.ಜೋಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ಡಿ.ಕೆ., ರೋಟರಿ ಗಂಗೊಳ್ಳಿ ಕಾರ್ಯದರ್ಶಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯೆ ಡಾ.ಸುಧಾ ಮೆನನ್ ಉಪಸ್ಥಿತರಿದ್ದರು.

ಕೆಎಸ್‌ಎಂಸಿಎ ಜಡ್ಕಲ್‌ನ ದೇವದಾಸ ವಂದಿಸಿದರು. ಸುಮಾರು ೨೦೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.

Exit mobile version